ನಾಗೋಯಾ: ಹಾಲಿ ಚಾಂಪಿಯನ್ ಚೀನಾವನ್ನು 1-0 ಗೋಲು ಅಂತರದಿಂದ ಮಣಿಸಿದ ಭಾರತ ಮಹಿಳಾ ಹಾಕಿ ತಂಡ, 44 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಇದರಿಂದಾಗಿ, 2028ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ ಕೂಟಕ್ಕೆ
ನೇರವಾಗಿ ಪ್ರವೇಶಿಸುವ ಅರ್ಹತೆ ದೊರೆತಿದೆ.ಇಂದು ಹಾಕಿ ಸೇರಿ ಭಾರತ 6 ಚಿನ್ನದ ಪದಕ ಗೆದ್ದುಕೊಂಡಿದೆ.ಪಂದ್ಯದ 10ನೇ ನಿಮಿಷದಲ್ಲೇ ಗೋಲು ಬಾರಿಸಿದ ಲಾಲ್ರೆಮ್ಸಿಯಾಮಿ, ಆರಂಭಿಕ ಮುನ್ನಡೆ ತಂದುಕೊಟ್ಟರು. ಅದನ್ನು ಕೊನೆವರೆಗೂ ಕಾಯ್ದುಕೊಂಡ ತಂಡ, ಚೀನಾಗೆ ಒಂದೂ ಗೋಲು ಬಿಟ್ಟುಕೊಡದೆ ಆಡಿತು.
ಜಪಾನ್ನ ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡೆಗಳ ಪದಕ ಬೇಟೆಯಲ್ಲಿ ಭಾರತ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದುವರೆಗೆ 16 ಚಿನ್ನ, 25 ಎಳ್ಳಿ ಮತ್ತು 35 ಕಂಚು ಗೆದ್ದಿರುವ ಟೀಂ ಇಂಡಿಯಾದ ಖಾತೆಯಲ್ಲಿ ಒಟ್ಟು 76 ಪದಕಗಳಿವೆ.ಚೀನಾ, ಜಪಾನ್, ದಕ್ಷಿಣ ಕೊರಿಯಾ, ಉಜ್ಬೇಕಿಸ್ತಾನ ಮೊದಲ ನಾಲ್ಕು ಸ್ಥಾನಗಳಲ್ಲಿ ಇವೆ.
ಒಲಿಂಪಿಯನ್ ಬಾಕ್ಸರ್’ ಲವ್ಲೀನಾ ಬೋರ್ಗೊಹೈನ್ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ, ಪುರುಷರ ಬಾಕ್ಸಿಂಗ್ ರಿಂಗ್ನಲ್ಲಿ ಅಂಕುಶ್ ಫಂಘಾಲ್ ಚಿನ್ನ ಗೆದ್ದರು.ಲವ್ಲೀನಾ ಅವರು 75 ಕೆ.ಜಿ ವಿಭಾಗದ ಫೈನಲ್ನಲ್ಲಿ 5-0ಯಿಂದ ಚೀನಾ ಝೀಯಿ ಬಾವೊ ವಿರುದ್ಧ ಮೇಲುಗೈ ಸಾಧಿಸಿದರು.65 ಕೆ.ಜಿ ವಿಭಾಗದಲ್ಲಿ ಪರ್ವೀನ್ ರೋಚಕ ಜಯಸಾಧಿಸಿ ಚಿನ್ನ ಗೆದ್ದರು. ಫೈನಲ್ನಲ್ಲಿ ಅವರು 3-2 ರಲ್ಲಿ ಚೈನಿಸ್ ತೈಪೆಯ ಚೆನ್ ನೀನ್ ಚಿನ್ ವಿರುದ್ಧ ಗೆದ್ದರು.ಪುರುಷರ 80 ಕೆ.ಜಿ ವಿಭಾಗದಲ್ಲಿ ಅಮೋಘ ಸಾಮರ್ಥ್ಯ ತೋರಿದ ಅಂಕುಶ್ ಸ್ವರ್ಣಗೌರವ ಗಳಿಸಿದರು. ಅಂಕುಶ್ ಅವರು ಫೈನಲ್ ಬೌಟ್ನಲ್ಲಿ 4-0ಯಿಂದ ದಕ್ಷಿಣ ಕೊರಿಯಾದ ಕಿಮ್ ಮಿನ್ಸೋಯಿಂಗ್ ವಿರುದ್ಧ ಜಯಭೇರಿ ಬಾರಿಸಿದರು.
ಮಹಿಳಾ ರಿಕರ್ವ್ ಬಿಲ್ಲುಗಾರಿಕೆ ತಂಡವನ್ನು ದಕ್ಷಿಣ ಕೊರಿಯಾ ಸೋಲಿಸಿ ಚಿನ್ನ ಗೆದ್ದು ಕೊಂಡಿತು









