ನಾಗೋಯಾ: ಏಷ್ಯನ್ ಕ್ರೀಡಾಕೂಟದ 20ನೇ ಆವೃತ್ತಿಯು ಜಪಾನ್ ದೇಶದ ಐಚಿ ನಾಗೋಯಾದಲ್ಲಿ ಶನಿವಾರ ಆರಂಭವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಯನ್ ಶೂಟರ್ ಮನು ಭಾಕರ್ ಮತ್ತು
ಶಾಟ್ಪಟ್ ಅಥ್ಲೀಟ್ ತಜೀಂದರ್ ಪಾಲ್ ಸಿಂಗ್ ತೂರ್ ಅವರು ಧ್ವಜಧಾರಿಗಳಾಗಿ ತಂಡವನ್ನು ಮುನ್ನಡೆಸುವರು.
ಭಾರತದ 503 (269 ಪುರುಷರು ಮತ್ತು 234 ಮಹಿಳೆಯರು) ಅಥ್ಲೀಟ್ಗಳು ಸ್ಪರ್ಧೆಗಳಲ್ಲಿ ಭಾಗವಹಿದರು.2028ರ ಒಲಿಂಪಿಕ್ಸ್ ಪ್ರವೇಶಕ್ಕೆ ಅರ್ಹತೆ ಗಿಟ್ಟಿಸುವ ಅವಕಾಶವೂ ಇಲ್ಲಿದೆ.
2023ರಲ್ಲಿ ಚೀನಾದಲ್ಲಿ ನಡೆದಿದ್ದ ಕೂಟದಲ್ಲಿ ಭಾರತ ತಂಡವು 106 ಪದಕ ಜಯಿಸಿತ್ತು. ಈ ಬಾರಿಯೂ ‘ಪದಕ–ಶತಕ’ ಸಾಧಿಸುವ ಭರವಸೆ ಯನ್ನು ತಂಡವು ಮೂಡಿಸಿದೆ.








