ಪಲೇಕೆಲೆ: ಏಷ್ಯಾಪಕ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ಆಟ ಸ್ಥಗಿತಗೊಂಡಿದೆ. ಇತ್ತೀಚಿನ ವರದಿ ಬಂದಾಗ ಭಾರತ 11.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದೆ. ರನ್ ಗಳಿಸಲು ಪರದಾಡಿದ
ಭಾರತೀಯ ಬ್ಯಾಟರ್ಗಳು ವಿಕೆಟ್ ಕೈ ಚೆಲ್ಲಿದರು ನಾಯಕ ರೋಹಿತ್ ಶರ್ಮ 11, ವಿರಾಟ್ ಕೊಹ್ಲಿ 4, ಶ್ರೇಯಸ್ ಅಯ್ಯರ್ 14 ರನ್ ಗಳಿಸಿ ಔಟ್ ಆದರು. 6 ರನ್ ಗಳಿಸಿದ ಶುಭಮನ್ ಗಿಲ್ ಹಾಗೂ 2 ರನ್ ಗಳಿಸಿದ ಇಸಾನ್ ಕಿಶನ್ ಕ್ರೀಸಿನಲ್ಲಿದ್ದಾರೆ. ಪಾಕಿಸ್ತಾನದ ಪರ ವೇಗದ ಬೌಲರ್ ಶಹೀನ್ ಅಫ್ರಿದಿ 15 ರನ್ ನೀಡಿ ಎರಡು ವಿಕೆಟ್, ಹ್ಯಾರೀಸ್ ರವೂಫ್ ಒಂದು ವಿಕೆಟ್ ಪಡೆದರು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಲಿ ಆಘಾ, ಇಫ್ರಿಕಾರ್ ಅಹಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಆಫ್ರಿದಿ, ನಸೀಂ ಶಹಾ, ಹ್ಯಾರಿಸ್ ರವೂಫ್