ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಸರಕಾರದ ಆದೇಶದಂತೆ ಸದಾನಂದ ಮಾವಜಿ ಅವರು ಅಧಿಕಾರ ಸ್ವೀಕರಿಸಿದರು. ಮಡಿಕೇರಿಯ ಅಕಾಡೆಮಿಯ ಕಚೇರಿಯಲ್ಲಿ ಜೂ.13 ರಂದು ಅವರು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ
ಅಕಾಡೆಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ ಇವರು ನೂತನ ಅಧ್ಯಕ್ಷರನ್ನು ಸ್ವಾಗತಿಸಿದರು. ಅಕಾಡೆಮಿ ನೂತನ ಸದಸ್ಯರಾದ ಚಂದ್ರಶೇಖರ ಪೇರಾಲು ಹಾಗೂ ಕಛೇರಿ ಸಿಬ್ಬಂದಿಗಳಾದ ಜ್ಯೋತಿ ಮತ್ತು ಶೋಭಾ ಉಪಸ್ಥಿತರಿದ್ದರು.
ಕಳೆದ ಮಾರ್ಚ್ ತಿಂಗಳಲ್ಲಿ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿತ್ತು. ಆದರೆ ಲೋಕಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಕಾರಣ ಅಧಿಕಾರ ಸ್ವೀಕಾರ ಮಾಡಿರಲಿಲ್ಲ. ಇದೀಗ ನೀತಿ ಸಂಹಿತೆ ಮುಗಿದ ಬಳಿಕ ಅಧ್ಯಕ್ಷರು ಇಂದು ಅಧಿಕಾರ ವಹಿಸಿದರು. ಸದಸ್ಯರು ಜೂ.20ರಂದು ಅಧಿಕಾರ ವಹಿಸಲಿದ್ದಾರೆ. ಬಳಿಕ ಅಂದು ಅಕಾಡೆಮಿಯ ಮೊದಲ ಸಭೆ ನಡೆಯಲಿದೆ.