ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ
ಸದಾನಂದ ಮಾವಜಿ ಅವರು ಮಡಿಕೇರಿ ಶಾಸಕರಾದ ಮಂಥರ್ ಗೌಡ ಇವರನ್ನು ಭೇಟಿ ಮಾಡಿ ಅರೆಭಾಷೆ ಅಕಾಡೆಮಿಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು. ಶಾಸಕರು ಅಕಾಡೆಮಿ ಕೆಲಸಗಳಿಗೆ
ಪೂರ್ಣ ಸಹಕಾರ ನಿಡುವುದಾಗಿ ಭರವಸೆ ನೀಡಿದರು. ನೂತನ ಕರ್ನಾಟಕ ಸಮುಚ್ಚಯ ಭವನ ಶೀಘ್ರದಲ್ಲಿ ಪೂರ್ಣಗೊಳಿಸಬೇಕಾಗಿ ಶಾಸಕರು ಹಾಗೂ ಜಿಲ್ಲಾಧಿಕಾರಿಯವರಲ್ಲಿ ನೂತನ ಅಧ್ಯಕ್ಷರು ಮನವಿ ಮಾಡಿದರು. ಇದರ ಜೊತೆಗೆ ಕೊಡಗು ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು, ಅರೆಭಾಷೆ ಅಕಾಡೆಮಿ ರಿಜಿಸ್ಟಾçರ್ ಚಿನ್ನಸ್ವಾಮಿ, ಉಪಸ್ಥಿತರಿದ್ದರು.