ಮಿಯಾಮಿ ಗಾರ್ಡನ್: ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಕೊಲಂಬಿಯಾ ಎದುರು 1–0 ಅಂತರದ ಗೆಲುವು ಸಾಧಿಸುವ ಮೂಲಕ ಅರ್ಜಿಂಟೀನಾ ಪಡೆ ಚಾಂಪಿಯನ್ ಪಟ್ಟಕ್ಕೇರಿತು. ಇದರೊಂದಿಗೆ 16ನೇ ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ನಾಯಕ, ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು
ಗಾಯಗೊಂಡು ಪೂರ್ಣವಾಧಿ ಮುಗಿಯುವ ಮುನ್ನವೇ ಮೈದಾನ ತೊರೆದರೂ, ಸಂಘಟಿತ ಆಟವಾಡಿದ ಅರ್ಜೆಂಟೀನಾ ಪಡೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಫ್ಲೋರಿಡಾದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಪಂದ್ಯದ ನಿಗದಿತ ಅವಧಿಯಲ್ಲಿ ಗೋಲು ದಾಖಲಿಸಲು ಎರಡೂ ತಂಡಗಳಿಗೆ ಸಾಧ್ಯವಾಗಲಿಲ್ಲ. ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾ ತಂಡದ ಲೌಟಾರೊ ಮಾರ್ಟಿನ್ಸ್ ಅವರು ಪಂದ್ಯದ ಮೊದಲ ಗೋಲು ಬಾರಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.