ಅರಂತೋಡು:ಕರ್ನಾಟಕ ಅರೆಭಾಣೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಸಂಘದ ಉದ್ಘಾಟನೆ ಮತ್ತು ಕಾಲೇಜು ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನುಅರೆಭಾಷೆ ಅಕಾಡಮಿ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಿ ಅರೆ ಭಾಷೆ ತ್ರೈಮಾಸಿಕ ಪತ್ರಿಕೆ ಹಿಂಗಾರದಲ್ಲಿ
ವಿದ್ಯಾರ್ಥಿ ಸಾಹಿತ್ಯಕ್ಕಾಗಿಯೇ ಪುಟಗಳನ್ನು ಮೀಸಲಿಟ್ಟಿದ್ದೇವೆ ವಿದ್ಯಾರ್ಥಿಗಳ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಅಲ್ಲದೇ ಮುಂದಿನ ಪೀಳಿಗೆಗೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ವಿದ್ಯಾರ್ಥಿಗಳ ಮೇಲಿದೆ ಎಂದರು.
ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಕೆ.ಆರ್. ಗಂಗಾಧರ್ ಅರೆಭಾಷೆ ಹೃದಯದ ಭಾಷೆ,ಈ ಭಾಷೆಯನ್ನು ಮಾತನಾಡಲು ಯಾವುದೇ ಮುಜುಗರ ಬೇಡ ಎಂದು ಹೇಳಿದರು. ಹಲವಾರು ಅರೆಭಾಷೆ ಪದಬಳಕೆಯ ಅರ್ಥ ಮತ್ತು ಇತರ ಯಾವ ಭಾಷೆಗಳಲ್ಲೂ ಇಲ್ಲದ ಶಬ್ದ ಭಂಡಾರದ ಸಿರಿವಂತಿಕೆಯನ್ನು ವಿವರಿಸಿದರು. ಉಪನ್ಯಾಸ ನೀಡಿದ ಸಾಹಿತಿ ಹಾಗೂ ಕಲಾವಿದರಾದ ಭವಾನಿಶಂಕರ ಅಡ್ತಲೆ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸಿ ಮನೆಯಲ್ಲಿನ ಹಿರಿಯರೇ ಅವರ ಜೀವನ ಸಾರವೇ ಸಾಹಿತ್ಯಕ್ಕೆ ಪ್ರೇರಣೆ ಎಂದರು .

ಮುಖ್ಯ ಅಥಿತಿಯಾಗಿ ಕಾಲೇಜಿನ ಪ್ರಾoಶುಪಾಲರಾದ ಎಸ್.ರಮೇಶ್, ಕಾರ್ಯಕ್ರಮ ಸಂಯೋಜಕರಾದ ಕಿಶೋರ್ ಕುಮಾರ್ ಕಿರ್ಲಾಯ ಶುಭ ಹಾರೈಸಿದರು. ಅರೆಭಾಷೆ ಅಕಾಡಮಿಯ ಸದಸ್ಯರಾದ ಚಂದ್ರಶೇಖರ ಪೇರಾಲ್, ತೇಜಕುಮಾರ್ ಕುಡೇಕಲ್, ಡಾ. ಜ್ಞಾನೇಶ್ ಏನ್ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡಮಿಯ ಸದಸ್ಯ ಸಂಚಾಲಕ ಲೋಕೇಶ್ ಊರುಬೈಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಜಯಂತ ಡಿ ಎಸ್, ಮೌಲ್ಯ ಎಂ ವಿ, ಮನೀಶ್ ಮತ್ತು ಶೋಭಿತ ಕೆ. ಕೆ. ಪ್ರಾರ್ಥನೆ ಹಾಡಿದರು ಸಂಘದ ಉಪಾಧ್ಯಕ್ಷ ಪವನ್ ಎಂ ಎ ಸ್ವಾಗತಿಸಿ ನಿರ್ದೇಶಕರಾದ ಶ್ರವಣ್ ಪಿ.ಡಿ ವಂದಿಸಿದರು. ಸಂಫದ ನೂತನ ಅಧ್ಯಕ್ಷೆ ಗ್ರೀಷ್ಮ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನೆಹರೂ ಮೆಮೋರಿಯಲ್ ಪ.ಪೂ.ಕಾಲೇಜಿನ ಅಧ್ಯಾಪಕ,ಉಪನ್ಯಾಸ ವೃಂದ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.