ಸುಳ್ಯ: ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಕಲ್ಲಪಳ್ಳಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದ ಕಾರಣ ಸ್ಥಗಿತಗೊಂಡಿದ್ದ ಸುಳ್ಯ-ಕಲ್ಲಪಳ್ಳಿ-ಪಾಣತ್ತೂರು-ಕಾಞಂಗಾಡ್ ಕೆಎಸ್ಆರ್ಟಿಸಿ ಬಸ್ ಸರ್ವೀಸ್ ಜೂ.29 ಭಾನುವಾರದಿಂದ ಪುನರಾರಂಭಗೊಳ್ಳಲಿದೆ. ಸುಳ್ಯ-ಪಾಣತ್ತೂರು ರಸ್ತೆಯಲ್ಲಿ
ಕಲ್ಲಪಳ್ಳಿ ದೊಡ್ಡಮನೆ ಭಾಗದಲ್ಲಿ ಪಾಡಿಕೊಚ್ಚಿ ರಸ್ತೆಯ ಸಮೀಪ ಸೇತುವೆ ಬದಿಯಲ್ಲಿ ಕುಸಿದ ಕಾರಣ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸುಮಾರು ಒಂದು ತಿಂಗಳಿನಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತು. ಇದೀಗ ಸೇತುವೆ ಬದಿಯ ಕಾಮಗಾರಿ ನಡೆಸಲಾಗಿದ್ದು ಜೂ.29ರಿಂದ ಮತ್ತೆ ಕೆಎಸ್ಆರ್ಟಿಸಿ ಸರ್ವೀಸ್ ಆರಂಭವಾಗಲಿದೆ ಎಂದು ಕೇರಳ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಸುಳ್ಯದಿಂದ ಪಾಣತ್ತೂರ್ ಮೂಲಕ ಕರಿಕೆಗೆ ಸಂಚರಿಸುವ ಖಾಸಗೀ ಬಸ್ ರೈ ಟ್ರಾವೆಲ್ಸ್ ಸೇತುವೆಯ ಎರಡೂ ಬದಿಯಲ್ಲಿ ಒಂದೊಂದು ಬಸ್ ಓಡಾಟ ನಡೆಸಿ ಪ್ರಯಾಣಿಕರಿಗೆ ಸರ್ವೀಸ್ ನೀಡಿತ್ತು.