ಸುಳ್ಯ:ಕಾಂಕ್ರೀಟೀಕರಣ ನಡೆದ ಕಾಯರ್ತೋಡಿ ದೇವಸ್ಥಾನದ ಕಡೆಗೆ ತೆರಳುವ ರಸ್ತೆ ಹಾಗು ದೇವಸ್ಥಾನದ ನಾಮಫಲಕದ ಉದ್ಘಾಟನೆ ಜೂ.15ರಂದು ನಡೆಯಿತು. ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ
ಅಧ್ಯಕ್ಷ ಎಂ.ವೆಂಕಪ್ಪ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಉದ್ಘಾಟಿಸಿದರು. ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ತಹಶೀಲ್ದಾರ್ ಎಂ.ಮಂಜುಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ,ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಪ್ರಮುಖರಾದ ಕೃಷ್ಣ ಕಾಮತ್, ಪಿ.ಎಸ್.ಗಂಗಾಧರ, ಗೀತಾ ಕೋಲ್ಚಾರ್, ಸುರೇಶ್ ಅಮೈ, ದಿನೇಶ್ ಅಂಬೆಕಲ್ಲು, ರಾಜು ಪಂಡಿತ್, ಶಾಫಿ ಕುತ್ತಮೊಟ್ಟೆ,ಶರೀಫ್ ಕಂಠಿ, ಪಿ.ಎ.ಮಹಮ್ಮದ್, ಶಶಿಧರ ಎಂ.ಜೆ, ನಂದರಾಜ ಸಂಕೇಶ ಮತ್ತಿತರರು ಉಪಸ್ಥಿತರಿದ್ದರು.






