ನವದೆಹಲಿ; ಲೋಕಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಗಿದಿದ್ದು ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬ ದೊಡ್ಡ ಪ್ರಶ್ನೆ ಎದ್ದಿದೆ. ಎನ್ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಾರಾ..? ಅಥವಾ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತದಾ ಎಂಬ ಕುತೂಹಲ ಎದ್ದಿದೆ. ಎನ್ಡಿಎ ಮತ್ತು
ಇಂಡಿಯಾ ಒಕ್ಕೂಟದ ಮಧ್ಯೆ ತೀವ್ರ ಪೈಪೋಟಿ ಕಂಡು ಬಂದಿದೆ. ಬಿಜೆಪಿ ನೇತೃತ್ವದ ಎನ್ಡಿಎ 295 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಮೈತ್ರಿಕೂಟ 229 ಕ್ಷೇತ್ತದಲ್ಲಿ ಮುನ್ನಡೆ ಸಾಧಿಸಿದೆ. ಇತರರು 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಲವು ಕ್ಷೇತ್ರಗಳಲ್ಲಿ ನೆಕ್ ಟು ನೆಕ್ ಫೈಟ್ ಕಂಡು ಬಂದಿದ್ದು ಯಾವುದೇ ಕ್ಷಣದಲ್ಲಿ ಬಹುಮತದ ಚಿತ್ರಣ ಬದಲಾವಣೆಯ ಸಾಧ್ಯತೆ ಇದೆ. ಈಗಿನ ಸ್ಥಿತಿಯಲ್ಲಿ ಎನ್ಡಿಎಗೆ ಬಹುಮತ ಇದ್ದರೂ ಬಿಜೆಪಿಗೆ ಏಕಾಂಗಿಯಾಗಿ ಅಧಿಕಾರಕ್ಕೆ ಬರುವಷ್ಟು ಬಹುಮತ ಇಲ್ಲ. ಬಿಜೆಪಿ 240 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಎನ್ಡಿಎ ಅಧಿಕಾರಕ್ಕೆ ಏರಲು ನಿತೀಶ್ ಕುಮಾರ್ ಅವರ ಜೆಡಿಯು ಹಾಗೂ ಚಂದ್ರಬಾಬು ನಾಯ್ಡು ಅವರ ನಿಲುವು ಟಿಡಿಪಿ ಪಕ್ಷಗಳ ನಿರ್ಣಾಯಕವಾಗಿದೆ. ಜೆಡಿಯು 15 ಸ್ಥಾನ ಹಾಗೂ ಟಿಡಿಪಿ 16 ಸ್ಥಾನ ಗಳಿಸಿವೆ. ಇವರ ಬೆಂಬಲ ದೊರೆತರೆ ಎನ್ಡಿಎ ಮತ್ತೆ ಅಧಿಕಾರಕ್ಕೆ ಏರುವುದು ಸುಲಭ ಸಾಧ್ಯ. ಆದರೆ ನಿತೀಶ್ ಕುಮಾರ್, ಚಂದ್ರಬಾಬು ನಿಲುವು ಬದಲಿಸಿದರೆ ಚಿತ್ರಣವೇ ಬದಲಾಗಬಹುದು.