ಅರಂತೋಡು:ಅರಂತೋಡು ತೆಕ್ಕಿಲ್ ಬಾಬಾ ಹಾಜಿಯವರ ಪತ್ನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರ ತಾಯಿ ಆಯಿಷಾ ಹಜ್ಜುಮ್ಮ (70) ಮೇ.20 ರಂದು ನಿಧನರಾದರು. ಕೂತುಪರಂಬ ಕೊಟ್ಟಾಯಂ ಪಾರಪ್ರವನ್ ಕುಟುಂಬದ
ಸದಸ್ಯೆಯಾದ ಪಯ್ಯೋಳಿ ಇರಿಙತ್ ನಾರಾಣತ್ ಆಯಿಷ ಹಜ್ಜುಮ ಅವರು ಪಾರಪ್ರನ್ ಎಂ.ಪಿ. ಅಬು ಹಾಜಿ ಸಾಹೇಬ್ ಹಾಗೂ ಫಾತಿಮಾ ದಂಪತಿಗಳ ಪುತ್ರಿ.
ಮೃತರು ಪುತ್ರರಾದ ಟಿ.ಎಂ.ಶಹೀದ್ ತೆಕ್ಕಿಲ್, ಟಿ.ಎಂ.ಶಮೀರ್ ತೆಕ್ಕಿಲ್, ಟಿ.ಎಂ.ಜಾವೇದ್ ತೆಕ್ಕಿಲ್, ಪುತ್ರಿಯರಾದ ಜಾಹೀರಾ, ನಸ್ರೀನಾ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.