ಹರಾರೆ: ಜಿಂಬಾಬ್ವೆ ವಿರುದ್ಧದ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ 42 ರನ್ಗಳ ಜಯ ಸಾಧಿಸಿದೆ. ಮೂಲಕ ಸರಣಿಯನ್ನು 4-1 ಅಂತರದಲ್ಲಿ ಕೈವಶ ಮಾಡಿಕೊಂಡಿತು.ಟಾಸ್ ಗೆದ್ದ ಜಿಂಬಾಬ್ವೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಮೊದಲು ಬ್ಯಾಟಿಂಗ್ ಮಾಡಿ
20 ಓವರ್ಗಳಲ್ಲಿ
ಭಾರತ 6 ವಿಕೆಟ್ ಕಳೆದುಕೊಂಡು 167 ರನ್ ಪೇರಿಸಿತು. ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹೀತ 58 ರನ್ ಬಾರಿಸಿದರೆ, ಶಿವಂ ದುಬೆ 26, ರಿಯಾನ ಪರಾಗ್ 22 ರನ್ ಭಾರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಜಿಂಬಾಬ್ವೆ ಪರ ಮುಜರಬನಿ 2 ವಿಕೆಟ್ ಪಡೆದರು. ಈ ಗುರಿಯನ್ನ ಬೆನ್ನತ್ತಿದ ಜಿಂಬಾಬ್ವೆ 18.3 ಓವರ್ಗಳಲ್ಲಿ 125 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಜಿಂಬಾಬ್ವೆ ಪರ ಮೇಯರ್ 34, ಮರುಮನಿ ಹಾಗೂ ಫರಾಜ್ ತಲಾ 27 ರನ್ ಸಿಡಿಸಿ ಗಮನ ಸೆಳೆದರು. ಭಾರತದ ಪರ ಮುಕೇಶ್ ಕುಮಾರ್ 4, ಶಿವಂ ದುಬೆ 2 ವಿಕೆಟ್ ಪಡೆದರು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ ನಾಲ್ಕರಲ್ಲಿ ಜಯ ಸಾಧಿಸಿದರೆ, ಜಿಂಬಾಬ್ವೆ ಕೇವಲ ಒಂದು ಪಂದ್ಯವನ್ನು ಮಾತ್ರ ಜಯ ಸಾಧಿಸಿತ್ತು.