ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್1 ಭೂಮಿಯ ಐದು ಕಕ್ಷೆಗಳ ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ, ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ. ಇಙದು ಮುಂಜಾನೆ ನಡೆದ 5ನೇ ಕಕ್ಷೆ ಬದಲಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರಿಂದ ಭೂಮಿಯ
ಕಕ್ಷೆ ಬಿಟ್ಟಿ ಆದಿತ್ಯ ಎಲ್ 1 ಪಾಯಿಂಟ್ ಕಡೆಗೆ ಪ್ರಯಾಣ ಆರಂಭಿಸಿದೆ. ಭೂಮಿಯಿಂದ 50,000 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಸೂಪರ್ ಥರ್ಮಲ್, ಅಯಾನುಗಳು, ಎಲೆಕ್ಟ್ರಾನ್ಗಳ ಬಗ್ಗೆ ಅಧ್ಯಯನ ಮಾಡಲಿದೆ. ಭೂಮಿಯ ಕಕ್ಷೆಯಿಂದ ಹೊರಬಂದು ಆದಿತ್ಯ L-1 ಅಧ್ಯಯನ ಆರಂಭಿಸಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.
ಈ ದತ್ತಾಂಶವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಗಳನ್ನು ಅಳೆಯಲು ಸಹಾಯ ಮಾಡಲಿದೆ. ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಆದಿತ್ಯ-ಎಲ್1 ಮಿಷನ್ನ ಉದ್ದೇಶವು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವುದಾಗಿದೆ.
ಇಲ್ಲಿಂದ ನೌಕೆಯು 15 ಲಕ್ಷ ಕಿಲೋಮೀಟರ್ ಪ್ರಯಾಣ ಆರಂಭಿಸಲಿದೆ. ಇದು ಜನವರಿ 2024 ರಲ್ಲಿ 110 ದಿನಗಳ ನಂತರ ಲಾಗ್ರಾಂಜಿಯನ್ ಪಾಯಿಂಟ್ 1 ಅನ್ನು ತಲುಪುತ್ತದೆ.ಆದಿತ್ಯ L1 ಅನ್ನು ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಲಾಗಿತ್ತು.