ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಭಾರತ ಪ್ರಥಮ ಇನ್ನಿಂಗ್ಸ್ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 264 ರನ ಪೇರಿಸಿದೆ. ಯಶಸ್ವಿ ಜೈಸ್ವಾಲ್ (58), ಸಾಯ್ ಸುದರ್ಶನ್(61 ಅರ್ಧ ಶತಕ ಮತ್ತು
ಕೆ.ಎಲ್. ರಾಹುಲ್ (46) ತಾಳ್ಮೆಯ ಆಟದಿಂದ ಭಾರತ ಮೊದಲ ದಿನ ಸಾಧಾರಣ ಮೊತ್ತ ಪೇರಿಸಿತು. ನಾಯಕ ಶುಭ್ಮನ್ ಗಿಲ್ 12 ರನ್ ಗಳಸಿ ಔಟ್ ಆದರೆ 37 ರನ್ ಬಾರಿಸಿದ ಉಪ ನಾಯಕ ರಿಷಬ್ ಪಂತ್ ಗಾಯಗೊಂಡು ಮರಳಿದರು. ದಿನದಾಟದ ಅಂತ್ಯಕ್ಕೆ ತಲಾ 19 ರನ್ ಗಳಿಸಿದ ರವೀಂದ್ರ ಜಡೇಜ ಮತ್ತು ಶಾರ್ದೂಲ್ ಠಾಕೂರ್ ಕ್ರೀಸಿನಲ್ಲಿದ್ದಾರೆ. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 2, ಕ್ರಿಸ್ ವೋಕ್ಸ್, ಲಿಯಾಂ ಡೋಸನ್ ತಲಾ ಒಂದು ವಿಕೆಟ್ ಪಡೆದರು.














