ಪಂಜ:ಆಟಿ ಅಮಾವಾಸ್ಯೆ ಪ್ರಯುಕ್ತ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ
ಹಾಲೆ ಮರದ ಕಷಾಯ ವಿತರಿಸಲಾಯಿತು. ಜು.24ರಂದು ಮುಂಜಾನೆ ಶ್ರೀ ದೇವರಿಗೆ ಪೂಜೆ ನಡೆದ ಬಳಿಕ

ಭಕ್ತರಿಗೆ ವಿಶೇಷ ತೀರ್ಥವಾಗಿ ಹಾಲೆ ಮರದ ಕಷಾಯ ವಿತರಿಸಲಾಯಿತು. ಹಲವು ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಕಷಾಯ ಸ್ವೀಕರಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಷಾಯ ಸೇವಿಸಿದರು.












