ಲಾರ್ಡ್ಸ್:ಭಾರತದ ವಿರುದ್ಧ ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 387 ರನ್ ಗಳಿಸಿ ಆಲೌಟ್ ಆಗಿದೆ.ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನ್ನೀಂಗ್ಸ್ನಲ್ಲಿ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ. 53 ರನ್ ಗಳಿಸಿದ
ಕೆ.ಎಲ್.ರಾಹುಲ್ ಹಾಗೂ 19 ರನ್ ಗಳಿಸಿದ ರಿಷಬ್ ಪಂತ್ ಕ್ರೀಸಿನಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್(13), ಕರುಣ್ ನಾಯರ್(40), ನಾಯಕ ಶುಭ್ಮನ್ ಗಿಲ್(16) ಔಟ್ ಆದರು.ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ಗೆ 251 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ, ಎರಡನೇ ದಿನ ಆಘಾತ ನೀಡಿದರು. ಹೀಗಾಗಿ, ಬೃಹತ್ ಮೊತ್ತ ಕಲೆಹಾಕುವ ಅವಕಾಶವನ್ನು ಆತಿಥೇಯ ತಂಡ ಕೈಚೆಲ್ಲಿತು. ಜೋ ರೂಟ್ ಶತಕ (104)ದಾಖಲಿಸಿದರು. ಬೆನ್ ಸ್ಟೋಕ್ಸ್ (44), ಜೆಮಿ ಸ್ಮಿತ್(51), ಬ್ರೈಡನ್ ಕಾರ್ಸೆ(56) ರನ್ ಬಾರಿಸಿದರು. ಭಾರತದ ಪರ ಜಸ್ಪ್ರೀತ್ ಬೂಮ್ರಾ 5 ವಿಕೆಟ್ ಪಡೆದರು. ಮಹಮ್ಮದ್ ಸಿರಾಜ್, ನಿತೀಶ್ ರೆಡ್ಡಿ ತಲಾ 2 ವಿಕೆಟ್ ಪಡೆದರು.














