ಅಹಮದಾಬಾದ್: ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 142 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ ಏಕದಿನ ಸರಣಿಯನ್ನು 3-0 ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 356 ರನ್ಗಳಿಸಿತು. ಗುರಿ ಬೆನ್ನಟ್ಟಿದ
ಇಂಗ್ಲೆಂಡ್ 34.2 ಓವರ್ಗಳಲ್ಲಿ 214 ರನ್ಗಳಿಗೆ ಆಲ್ ಔಟ್ ಆಯಿತು. ಭಾರತದ ಪರ ಉಪನಾಯಕ ಶುಭಮನ್ ಗಿಲ್ ಸೊಗಸಾದ ಶತಕ (112) ಸಿಡಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು.ವಿರಾಟ್ ಕೊಹ್ಲಿ ಅರ್ಧ ಶತಕ (52) ಸಿಡಿಸಿ ಔಟಾದರು. ನಂತರ ಬಂದ ಅಯ್ಯರ್ ಕೂಡ ಅರ್ಧ ಶತಕ (78) ಪೇರಿಸುವ ಮೂಲಕ ತಂಡ 300 ರನ್ಗಳ ಗಡಿ ದಾಟಲು ನೆರವಾದರು. ರಾಹುಲ್ 40 ರನ್ಗಳಿಸಿ ಗಮನ ಸೆಳೆದರು.
ಆದಿಲ್ ರಶೀದ್ 4 ವಿಕೆಟ್ ಗಳಿಸಿದರು. ಇಂಗ್ಲೆಂಡ್ ಪರ ಬೆನ್ ಡಕೆಟ್ 34, ಫಿಲ್ ಸಾಲ್ಟ್ 23, ಟಾಮ್ ಬ್ಯಾಂಟನ್ 38, ಜೋ ರೂಟ್ 24 ರನ್ ಬಾರಿಸಿದರು.
ಭಾರತದ ಬೌಲರ್ ಗಳಾದ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ತಲಾ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.