ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡಚಣೆಯಾಗಿದೆ.
ಮಳೆ ಹಾಗೂ ಮಂದ ಬೆಳಕಿನಿಂದಾಗಿ ಎತಡನೇ ದಿನದ ಆಟ ಸಂಪೂರ್ಣ ರದ್ದುಗೊಂಡಿದೆ. ಎರಡನೇ ದಿನದ ಆಟ ರದ್ದುಗೊಂಡ ಹಿನ್ನಲೆಯಲ್ಲಿ
ಆಟಗಾರರು ಬೇಗನೇ ಹೋಟೆಲ್ಗೆ ಮರಳಿದರು.ಮಳೆಯಿಂದಾಗಿ ಮೊದಲ ದಿನವೂ ಪಂದ್ಯಕ್ಕೆ ಅಡಚಣೆಯಾಗಿತ್ತು. ಪ್ರಥಮ ದಿನದ ಅಂತ್ಯಕ್ಕೆ ಬಾಂಗ್ಲಾದೇಶ 35 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು.ಭಾರತದ ಪರ ಆಕಾಶ್ ದೀಪ್ ಎರಡು ಮತ್ತು ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಗಳಿಸಿದ್ದಾರೆ.
ಚೆನ್ನೈಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 280 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.
ಈಗ ಸ್ವದೇಶದಲ್ಲಿ ಹದಿನೆಂಟನೇ ಟೆಸ್ಟ್ ಸರಣಿಯನ್ನು ಜಯಿಸಿ ದಾಖಲೆ ಬರೆಯುವತ್ತ ಆತಿಥೇಯ ಭಾರತ ತಂಡ ಕಣ್ಣಿಟ್ಟಿದೆ.