ಮುಲ್ಲನಪುರ: ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾವು ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿದೆ.ಮುಲ್ಲನಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ
ಅತಿಥೇಯ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು.ಭಾರತವು ಮೊದಲ ದಿನದ ಅಂತ್ಯಕ್ಕೆ 85 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 368 ರನ್ ಗಳಿಸಿದೆ.ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು 24 ರನ್ ಗಳಿಸಿ, ಸಲೀಂ ಸಫಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.ನಂತರ ಎರಡನೇ ವಿಕೆಟ್ಗೆ ರಾಹುಲ್ಗೆ ಜೊತೆಯಾದ ಸಾಯಿ ಸುದರ್ಶನ್(81 ರನ್: 104 ಎಸೆತ) ತಮ್ಮ ಫಾರ್ಮ್ ಮುಂದುವರಿಸಿದರು. ಇವರಿಬ್ಬರು 139 ರನ್(184 ಎಸೆತ) ಜೊತೆಯಾಟವಾಡಿದರು. ಸಾಯಿ ಕೂಡ ಸಲೀಂ ಸಫಿ ಎಸೆತದಲ್ಲಿ ಔಟ್ ಆದರು. ಕೆ.ಎಲ್ ರಾಹುಲ್ 100 ರನ್ ಗಳಿಸಿದ್ದ ವೇಳೆ
ಜಿಯಾವುರ್ ರೆಹಮಾನ್ ಶರೀಫಿ ಎಸೆತದಲ್ಲಿ ಕ್ಯಾಚ್ ನೀಡಿ ಫೆವಿಲಿಯನ್ ಸೇರಿದರು.ನಾಯಕ ಶುಭಮನ್ ಗಿಲ್( ಅಜೇಯ 103 ರನ್) ಕೂಡ ಭರ್ಜರಿ ಶತಕ ಸಿಡಿಸಿದರು. ರಿಷಭ್ ಪಂತ್ ( ಅಜೇಯ 50 ರನ್) ಅರ್ಧಶತಕ ಸಿಡಿಸುವ ಮೂಲಕ ಆಸರೆಯಾದರು.
ಶತಕ ಗಳಿಸಿರುವ ನಾಯಕ ಗಿಲ್ ಮತ್ತು ಅರ್ಧಶತಕ ಗಳಿಸಿರುವ ಪಂತ್ ಕ್ರೀಸ್ನಲ್ಲಿದ್ದು, ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.
ಅಫ್ಗಾನಿಸ್ತಾನ ಪರ ಸಲೀಂ ಸಫಿ 2 ವಿಕೆಟ್, ಜಿಯಾವುರ್ ರೆಹಮಾನ್ 1 ವಿಕೆಟ್ ಪಡೆದರು.













