ಸುಳ್ಯ:ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯತ್ವಕ್ಕೆ
ಶಾಫಿ ಕುತ್ತಮೊಟ್ಟೆ (ಉಮರ್ ಶಾಫಿ) ರಾಜಿನಾಮೆ ನೀಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಸೇರಿ ಪ್ರಮುಖರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಶಾಫಿ ಕುತ್ತಮೊಟ್ಟೆ ತಿಳಿಸಿದ್ದಾರೆ. ನಿನ್ನೆ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪುನರ್ ರಚನೆ ಮಾಡಿದ್ದು ಪಿ.ಎಸ್.ಗಂಗಾಧರ ಅಧ್ಯಕ್ಷರಾಗಿ ಮತ್ತು
ಶಾಫಿ ಕುತ್ತಮೊಟ್ಟೆ ಸೇರಿ 14 ಮಂದಿ ಸದಸ್ಯರನ್ನು ನೇಮಕ ಮಾಡಿತ್ತು.’ಕಳೆದ 24 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಸಕ್ರೀಯನಾಗಿದ್ದರೂ ಗ್ಯಾರಂಟಿ ಸಮಿತಿಗೆ ಅಧ್ಯಕ್ಷತೆಗೆ ಪರಿಗಣಿಸದೇ ಕೇವಲ ಸದಸ್ಯನಾಗಿ ನೇಮಕ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅವರು ರಾಜಿನಾಮೆ ಸಲ್ಲಿಸಿದ್ದಾರೆ. ಎನ್ಎಸ್ಯುಐ, ಕಾಂಗ್ರೆಸ್ ಪಕ್ಷದಲ್ಲಿ ದುಡಿದು
ಇಂಟೆಕ್ ಕಾಂಗ್ರೆಸ್ ವಿಧಾನಸಭಾ ಅಧ್ಯಕ್ಷ ಸೇರಿ 24 ವರ್ಷಗಳಲ್ಲಿ ಪಕ್ಷದ ವಿವಿಧ ಹುದ್ದೆಗಳಲ್ಲಿ ದುಡಿದರೂ ಈಗ ಗ್ಯಾರಂಟಿ ಸಮಿತಿ ಅಧ್ಯಕ್ಷತೆಗೆ ಪರಗಣಿಸದೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯನಾಗಿ ಆಯ್ಕೆ ಮಾಡಿರುವುದಕ್ಕೆ ಬೇಸರ ತರಿಸಿದೆ.
ನಾನು ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯನಾಗಲು ಬಯಸಿಲ್ಲ, ನಾನು ಇಷ್ಟು ವರ್ಷ ಪಕ್ಷಕ್ಕೆ ದುಡಿರುವುದರಿಂದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷನಾಗಲು ಅರ್ಹನಾದ ವ್ಯಕ್ತಿ. ಆದುದರಿಂದ ನನ್ನ ಈ ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯನಾಗಿ ಮುಂದುವರಿಯಲು ಆಸಕ್ತನಾಗಿಲ್ಲ. ಈ ಸದಸ್ಯತ್ವವನ್ನು ಯಾವುದಾದರೂ ಕಾರ್ಯಕರ್ತನಿಗೆ ಕೊಟ್ಟು ನನ್ನನ್ನು ಅದರಿಂದ ತೆರವುಗೊಳಿಸಬೇಕಾಗಿ ವಿನಂತಿಸುತ್ತೇನೆ ಎಂದು ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.







