ಸುಳ್ಯ:ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ
ಸುಳ್ಯ ತಾಲೂಕಿನ ಕ್ಷೇತ್ರಗಳು ಪುನರ್ ವಿಂಗಡಣೆಯಾಗಲಿದ್ದು 11 ತಾಲೂಕು ಪಂಚಾಯತ್ ಕ್ಷೇತ್ರಗಳು ಹಾಗೂ 3 ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಇರಲಿದೆ ಎಂದು ಈಗಾಗಲೇ ತಯಾರಿಸಲಾದ ಕರಡು ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ. ಕ್ಷೇತ್ರ ಪುನರ್ವಿಂಗಡನೆ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯ ಪಡೆಯಲು ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತಿಯಲ್ಲಿ ತಾಲೂಕು ಕಚೇರಿಯಲ್ಲಿ ಜು.24 ರಂದು
ಸಭೆ ನಡೆಯಿತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಪಂಚಾಯತ್ ಕ್ಷೇತ್ರ ಸಂಖ್ಯೆ ಒಂದು ಏರಿಸಿದರೆ ಉತ್ತಮ ಎಂಬ ಸಲಹೆಯನ್ನು ಎರಡೂ ಪಕ್ಷಗಳ ಮುಖಂಡರು ನೀಡಿದರು. ಆದರೆ ತಾಲೂಕು ಪಂಚಾಯತ್ ಕೆಲವು ಕ್ಷೆತ್ರದ ಬಗ್ಗೆ ಎರಡೂ ಪಕ್ಚಗಳ ಮುಖಂಡರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ಮಧ್ಯೆ ವಾಗ್ವಾದ ನಡೆಯಿತು.
ಬಿಜೆಪಿ ಸಲಹೆ ಏನು:
ತಾಲೂಕು ಪಂಚಾಯತ್ ಕ್ಷೇತ್ರ ಸಂಬಂಧಿಸಿ ಮುರುಳ್ಯ, ಪೆರುವಾಜೆ, ಕೊಡಿಯಾಲ ಗ್ರಾಮ ಸೇರಿಸಿ ಪೆರುವಾಜೆ ಕ್ಷೇತ್ರ ರೂಪಿಸಬೇಕು, ಬೆಳ್ಳಾರೆ, ಬಾಳಿಲ, ಮುಪ್ಪೇರ್ಯ, ಕಳಂಜ ಸೇರಿ ಬೆಳ್ಳಾರೆ ಕ್ಷೇತ್ರ ರೂಪಿಸಬೇಕು ಎಂದು ಬಿಜೆಪಿ ಮುಖಂಡರು ಸಲಹೆ ನೀಡಿದರು. ಜಿಲ್ಲಾ ಪಂಚಾಯತ್ ಈಗ ಪ್ರಸ್ತಾಪಿಸಿರುವ 3 ಕ್ಷೇತ್ರಕ್ಕೆ ಒಪ್ಪಿಗೆ ಇದೆ. ಆದರೆ 4 ಕ್ಷೇತ್ರ ರೂಪಿಸುವ ಅವಕಾಶ ಇದ್ದರೆ ಯಾವೆಲ್ಲಾ ಗ್ರಾಮ ಸೇರ್ಪಡೆ ಮಾಡಬಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದರು.

ಕಾಂಗ್ರೆಸ್ ಸಲಹೆ ಏನು.?
ತಾಲೂಕು ಪಂಚಾಯತ್ ಕ್ಷೇತ್ರ ಸಂಬಂಧಿಸಿ ಬೆಳ್ಳಾರೆ, ಕೊಡಿಯಾಲ, ಪೆರುವಾಜೆ ಗ್ರಾಮ ಸೇರಿಸಿ ಬೆಳ್ಳಾರೆ ಕ್ಷೇತ್ರ, ಬಾಳಿಲ, ಮುಪ್ಪೇರ್ಯ, ಕಳಂಜ ಸೇರಿ ಬಾಳಿಲ ಕ್ಷೇತ್ರ ರೂಪಿಸಬೇಕು. ಜಿಲ್ಲಾ ಪಂಚಾಯತ್ ಕ್ಷೇತ್ರ ಸಂಖ್ಯೆ 3 ರಿಂದ 4ಕ್ಕೆ ಏರಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಸಲಹೆ ನೀಡಿದರು.
ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಮಂಜುನಾಥ್, ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟುಕಾನ, ಮುಖಂಡರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ರಾಜೀವಿ ಆರ್. ರೈ, ಸದಾನಂದ ಮಾವಜಿ, ಶ್ರೀನಾಥ್ ಬಾಳಿಲ, ಮಹೇಶ್ ಕುಮಾರ್ ರೈ ಮೇನಾಲ, ಸುನಿಲ್ ಕೇರ್ಪಳ, ಅನಿಲ್ ಬಳ್ಳಡ್ಕ, ಮಾಧವ ಚಾಂತಾಳ ಮತ್ತಿತರರು ಉಪಸ್ಥಿತರಿದ್ದರು.
ಪ್ರಸ್ತಾಪಿತ ಜಿಲ್ಲಾ ಪಂಚಾಯತ್ ಕ್ಷೇತ್ರ 3:
ಬೆಳ್ಳಾರೆ ಜಿಲ್ಲಾ ಪಂಚಾಯತ್ ಕ್ಷೇತ್ರ:
ಬೆಳ್ಳಾರೆ, ಕೊಡಿಯಾಲ, ಪೆರುವಾಜೆ, ಮುರುಳ್ಯ, ಬಾಳಿಲ, ಮುಪ್ಪೆರಿಯಾ, ಕಳಂಜ, ಅಮರಪಡ್ನೂರು, ಅಮರಮುಡ್ನೂರು, ಐವರ್ನಾಡು, ಐವತ್ತೊಕ್ಲು, ಕೂತ್ಕೂಂಜ, ಪಂಬೆತ್ತಾಡಿ, ಕಲ್ಮಡ್ಕ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 39,167 ಜನಸಂಖ್ಯೆ ಹೊಂದಿದೆ.
ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರ:
ಜಾಲ್ಸೂರು, ಕನಕಮಜಲು, ಮಂಡೆಕೋಲು, ಅಜ್ಜಾವರ, ಆಲೆಟ್ಟಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 29,851 ಜನಸಂಖ್ಯೆ ಹೊಂದಿದೆ.
ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರ:
ಗುತ್ತಿಗಾರು, ನಾಲ್ಕೂರು, ಅರಂತೋಡು, ತೊಡಿಕಾನ, ಸಂಪಾಜೆ, ದೇವಚಳ್ಳ, ನೆಲ್ಲೂರು ಕೆಮ್ರಾಜೆ, ಮರ್ಕಂಜ, ಉಬರಡ್ಕ ಮಿತ್ತೂರು, ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಮಡಪ್ಪಾಡಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 38,640 ಜನಸಂಖ್ಯೆ ಹೊಂದಿದೆ.

ಪ್ರಸ್ತಾಪಿತ ತಾ.ಪಂ. ಕ್ಷೇತ್ರಗಳು 11:
ಬೆಳ್ಳಾರೆ ತಾ.ಪಂ. ಕ್ಷೇತ್ರ:
ಬೆಳ್ಳಾರೆ, ಕೊಡಿಯಾಲ, ಪೆರುವಾಜೆ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, ಒಟ್ಟು 10, 584 ಜನಸಂಖ್ಯೆ ಹೊಂದಿದೆ.
ಬಾಳಿಲ ತಾ.ಪಂ. ಕ್ಷೇತ್ರ: ಬಾಳಿಲ, ಮುಪ್ಪೇರಿಯಾ, ಕಳಂಜ, ಮುರುಳ್ಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 8,450 ಜನಸಂಖ್ಯೆ ಹೊಂದಿದೆ.
ಐವರ್ನಾಡು ತಾ.ಪಂ. ಕ್ಷೇತ್ರ ಐವರ್ನಾಡು,ಅಮರ ಮುಡ್ನೂರು, ಅಮರಪಡ್ನೂರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 11,501 ಜನಸಂಖ್ಯೆ ಹೊಂದಿದೆ.
ಜಾಲ್ಸೂರು ತಾ.ಪಂ. ಕ್ಷೇತ್ರ: ಜಾಲ್ಸೂರು, ಕನಕಮಜಲು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 9,048 ಜನಸಂಖ್ಯೆ ಹೊಂದಿದೆ.
ಅಜ್ಜಾವರ ತಾ.ಪಂ. ಕ್ಷೇತ್ರ: ಅಜ್ಜಾವರ, ಮಂಡೆಕೋಲು ಗ್ರಾಮಗಳ ವ್ಯಾಪ್ತಿ ಹೊಂದಿದ್ದು, 12,574 ಜನಸಂಖ್ಯೆ ಹೊಂದಿದೆ.

ಆಲೆಟ್ಟಿ ತಾ.ಪಂ. ಕ್ಷೇತ್ರ:
ಆಲೆಟ್ಟಿ ಗ್ರಾಮವನ್ನು ಹೊಂದಿದ್ದು, 8,229 ಜನಸಂಖ್ಯೆ ಹೊಂದಿದೆ.
ಅರಂತೋಡು ತಾ.ಪಂ. ಕ್ಷೇತ್ರ: ಅರಂತೋಡು, ತೊಡಿಕಾನ, ಸಂಪಾಜೆ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 11,349 ಜನಸಂಖ್ಯೆ ಹೊಂದಿದೆ.
ಮಡಪ್ಪಾಡಿ ತಾ.ಪಂ. ಕ್ಷೇತ್ರ: ಮಡಪ್ಪಾಡಿ, ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 7,089 ಜನಸಂಖ್ಯೆ ಹೊಂದಿದೆ.
ನೆಲ್ಲೂರು ಕೆಮ್ರಾಜೆ ತಾ.ಪಂ. ಕ್ಷೇತ್ರ:
ನೆಲ್ಲೂರು ಕೇಮ್ರಾಜೆ, ಮರ್ಕಂಜ, ಉಬರಡ್ಕ ಮಿತ್ತೂರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 9646 ಜನಸಂಖ್ಯೆ ಹೊಂದಿದೆ.
ಗುತ್ತಿಗಾರು ತಾ.ಪಂ.ಕ್ಷೇತ್ರ: ಗುತ್ತಿಗಾರು, ನಾಲ್ಕೂರು, ದೇವಚಳ್ಳ ಗ್ರಾಮ ವ್ಯಾಪ್ತಿಯನ್ನು ಹೊಂದಿದೆ. 10,556 ಜ
ಪಂಜ ತಾ.ಪಂ. ಕ್ಷೇತ್ರ: ಐವತ್ತೋಕ್ಲು, ಕೂತ್ಕೂಂಜ, ಕಲ್ಮಡ್ಕ, ಪಂಬೆತ್ತಾಡಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು,
8632 ಜನಸಂಖ್ಯೆ ಹೊಂದಿದೆ.