ಸುಳ್ಯ:ಕೋಲ್ಚಾರು ಕುಟುಂಬಸ್ಥರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮೇ.16ರಿಂದ 18ರ ತನಕ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯಲಿದೆ. ಸುಳ್ಯ ತಾಲೂಕಿನ ತೊಡಿಕಾನ ಸೀಮೆಗೆ ಒಳಪಟ್ಟ ಆಲೆಟ್ಟಿ ಗ್ರಾಮದ ಶ್ರೀ ಸದಾಶಿವ ಗ್ರಾಮ ದೇವರ ಹಾಗೂ ಕುತ್ತಿಕೋಲ್ ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಪರಿಧಿಯಲ್ಲಿರುವ ಕೇರಳ ಗಡಿಪ್ರದೇಶವಾದ ಕೋಲ್ದಾರು ಮಣಿಗಾರಜ್ಜನ ವಂಶಸ್ಥರ ತರವಾಡಿನ ದೈವ ಸನ್ನಿಧಿಯಲ್ಲಿ ನಡೆಯುವ ದೈವಂಕಟ್ಟು ಮಹೋತ್ಸವಕ್ಕೆ

ಅದ್ದೂರಿ ಸಿದ್ಧತೆಗಳನ್ನು ಮಾಡಲಾಗಿದೆ.
ಮೇ16 ರಂದು (ಇಂದು) ಬೆಳಗ್ಗೆ 8-30ಕ್ಕೆ ಕೋಲ್ಚಾರು ಐನ್‌ಮನೆಯಿಂದ ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರದ ವಠಾರದಿಂದ ಊರ-ಪರವೂರ ಭಕ್ತಾಧಿಗಳಿಂದ ಚೆಂಡೆ ವಾದ್ಯ
ಘೋಷಗಳೊಂದಿಗೆ ಶ್ರೀ ಸನ್ನಿಧಿಗೆ ಹಸಿರುವಾಣಿ ಮೆರವಣಿಗೆ ನಡೆದು ಪೂ. 10-00ಕ್ಕೆ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಲಿದೆ.
ಪೂ. 11ರಿಂದ ಧಾರ್ಮಿಕ ಸಭೆ ನಡೆಯಲಿದೆ. ಬೆಂಗಳೂರು ಚೆನ್ನೇನಹಳ್ಳಿಯ ಜನ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎ. ಎಸ್, ನಿರ್ಮಲ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ರಾತ್ರಿ 7 ಕ್ಕೆ ಕೈವೀದು ನಡೆಯಲಿದೆ.

ಪುರುಷೋತ್ತಮ ಕೋಲ್ಚಾರು ಅವರಿಂದ ಮಾಹಿತಿ
ಮೇ 17 ರಂದು ಸಂಜೆ 4.30ಕ್ಕೆ
ತರವಾಡು ದೈವಸ್ಥಾನದಿಂದ ಭಂಡಾರ ತರುವುದು.
5-30ಕ್ಕೆ ಶ್ರೀ ಕಾರ್ನೋನ್ ದೈವದ ವೆಳ್ಳಾಟ್ಟಂ ಸಂಜೆ 6-ಕ್ಕೆ ಶ್ರೀ ಕೋರಚ್ಛನ್ ದೈವದ ವೆಳ್ಳಾಟ್ಟಂ, ರಾತ್ರಿ 7-30ಕ್ಕೆ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಡೆಯಲಿದೆ.ರಾತ್ರಿ 12 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್, ರಾತ್ರಿ 1 ಕ್ಕೆ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ
ಮೇ.18ರಂದು ಬೆಳಗ್ಗೆ 7 ರಿಂದ ಶ್ರೀ ಕಾರ್ನೋನ್ ದೈವ, ಬೆಳಗ್ಗೆ 9 ರಿಂದ ಶ್ರೀ ಕೋರಚ್ಚನ್ ದೈವಪೂರ್ವಾಹ್ನ 11ರಿಂದ ಶ್ರೀ ಕಂಡನಾರ್ ಕೇಳನ್ ದೈವಗಳ ಕೋಲ ನಡೆಯಲಿದೆ.ಅಪರಾಹ್ನ 3ರಿಂದ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಲಿದೆ.ಅಪರಾಹ್ನ 4ರಿಂದ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ.ರಾತ್ರಿ ಮರ ಪಿಳರ್ಕಲ್, ನಂತರ ಕೈವೀದು ನಡೆಯುವುದರೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ. ಮೂರು ದಿನಗಳ ಕಾಲ ನಿರಂತರ ಉಪಹಾರ ಮತ್ತು ಅನ್ನದಾನ ನಡೆಯಲಿರುವುದು ಎಂದು ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ತಿಳಿಸಿದ್ದಾರೆ.
ಅದ್ದೂರಿ ಸಿದ್ಧತೆ:
ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಅದ್ದೂರಿ ಸಿದ್ಧತೆಗಳನ್ನ ಮಾಡಲಾಗಿದೆ. ಮಹೋತ್ಸವಕ್ಕಾಗಿ ನಾಡಿಗೇ ನಾಡೇ ಅಣಿಯಾಗಿದೆ. ವರ್ಣ ವೈವಿಧ್ಯ ತಳಿರು ತೋರಣಗಳಿಂದ, ಪ್ಲೆಕ್ಸ್, ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿದೆ. ಸುಳ್ಯ ಕೋಲ್ಚಾರ್ ಬಂದಡ್ಕ ರಸ್ತೆ ಮುಖ್ಯ ರಸ್ತೆಯಿಂದ ದೈವಸ್ಥಾನಕ್ಕೆ ಪ್ರವೇಶಿಸುವ ದ್ವಾರ ಆಕರ್ಷಕವಾಗಿ ಮನ ಸೆಳೆಯುತಿದೆ. ದೈವಸ್ಥಾನದ ಮಾದರಿಯಲ್ಲಿಯೇ ದ್ವಾರ

ನಿರ್ಮಿಸಲಾಗಿದೆ. ಸುಳ್ಯ ನಗರ ಸಮೀಪದ ನಾಗಪಟ್ಟಣ ಸೇತುವೆ ಬಳಿಯಿಂದಲೇ ಶೃಂಗಾರಗೊಂಡು ಭಕ್ತರನ್ನು ಸ್ವಾಗತಿಸುತಿದೆ.ಅಲ್ಲಿಂದ ದೈವಸ್ಥಾನದ ತನಕ ರಸ್ತೆ ಬದಿಯಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪ್ಲೆಕ್ಸ್‌ಗಳು, ಬಂಟಿಂಗ್ಸ್‌ಗಳು ಮೂಲಕ ಗ್ರಾಮವೇ ಶೃಂಗಾರಗೊಂಡಿದೆ.
ದೈವಂಕಟ್ಟು ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ದೈವದ ಅಂಗಣ ಮತ್ತಿತರ ವ್ಯವಸ್ಥೆಗಳು. ಆಗಮಿಸುವವರಿಗೆ

ಕುಳಿತುಕೊಳ್ಳಲು ವಿಶಾಲವಾದ ವ್ಯವಸ್ಥೆ. ವಿಶಾಲವಾದ ಊಟದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೈವಸ್ಥಾನದ ಸುತ್ತಲೂ ಲೈಟಿಂಗ್ಸ್‌ಗಳನ್ನು, ಬಣ್ಣ ಬಣ್ಣದ ಲೈಟಿಂಗ್ಸ್‌ಗಳು ಅಳವಡಿಸಲಾಗಿದೆ. ಮೂರು ದಿನಗಳ ಅದ್ದೂರಿ ಮಹೋತ್ಸವಕ್ಕೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ.
50 ವರ್ಷದ ಬಳಿಕ ಕೋಲ್ಚಾರು ಕುಟುಂಬದ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ ನಡೆಯುತಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಹೇಳುತ್ತಾರೆ.
