ಸುಳ್ಯ:ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ಧಾಳಿಯಿಂದ ಮಡಿದವರಿಗೆ ಭಾರತೀಯರಿಗೆ ಸುಳ್ಯ ಯುವ ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರು ಮೊಂಬತ್ತಿ ಉರಿಸಿ, ಘಟನೆಯಲ್ಲಿ
ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ,ಎ.ಎ.ಪಿ ಮುಖಂಡ ಅಶೋಕ್ ಎಡಮಲೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ,
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಮಾತನಾಡಿ ಘಟನೆಯನ್ನು ಖಂಡಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನ.ಪಂ.ಸದಸ್ಯ ಸಿದ್ದಿಕ್ ಕೊಕ್ಕೋ, ಪ್ರಮುಖರಾದ ಕೆ.ಗೋಕುಲ್ ದಾಸ್, ದಿನೇಶ್ ಅಂಬೆಕಲ್ಲು, ಭವಾನಿಶಂಕರ ಕಲ್ಮಡ್ಕ, ನಂದರಾಜ ಸಂಕೇಶ, ಜುಬೈರ್ ಅರಂತೋಡು, ಎಸ್ಕೆ.ಹನೀಫ ಸಂಪಾಜೆ, ಜಿ.ಕೆ.ಹಮೀದ್ ಗೂನಡ್ಕ, ಬಶೀರ್ ನಾವೂರು, ರಾಧಾಕೃಷ್ಣ ಪರಿವಾರಕಾನ, ಮನ್ಸೂರ್ ಮೆಟ್ರೋ, ಅಬ್ಬಾಸ್ , ಭೋಜಪ್ಪ ನಾಯ್ಕ್ ಅಡ್ಕಾರು, ಧನಂಜಯ ಕಲ್ಮಡ್ಕ, ಚಂದ್ರಶೇಖರ ಕೋಲ್ಚಾರ್, ಹೈದರ್ ಹಳೆಗೇಟು, ಜನಾರ್ದನ ಪ್ರಭು, ಇಬ್ರಾಹಿಂ ಜಯನಗರ, ಶಿವರಾಮ ಅಮೈ, ಸುರೇಶ್ ಎಂ.ಹೆಚ್., ರಿಯಾಜ್ ಕಟ್ಟೆಕಾರ್, ಧರ್ಮಪಾಲ ಕೊಯಿಂಗಾಜೆ, ಆಶಿಕ್ ಅರಂತೋಡು, ಭಾಸ್ಕರ ಪೂಜಾರಿ ದುಗಲಡ್ಕ, ಕೇಶವ ಮೊರಂಗಲ್ಲು, ನಝೀರ್ ಶಾಂತಿನಗರ, ಸುರೇಶ್ ಕಾಮತ್ ಮೊದಲಾದವರಿದ್ದರು.
ಶಶಿಧರ ಎಂ.ಜೆ. ಕಾರ್ಯಕ್ರಮ ನಿರ್ವಹಿಸಿದರು.







