ಮಂಗಳೂರು:ಜಿಲ್ಲೆಯಲ್ಲಿ ಒಟ್ಟು 16,46,387 ಮತದಾರರಿದ್ದು, ಇದರಲ್ಲ್ಲಿ 8,07,600 ಪುರುಷರು, 8,38,768 ಮಹಿಳೆಯರು ಮತ್ತು 19 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ.ನೋಟೀಸ್ಗಳ ಸೃಜನೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಒಟ್ಟು
1,50,144 ನೋಟೀಸ್ಗಳನ್ನು ಸೃಜಿಸಲಾಗುವುದು. ನೋಟಿಸ್ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು 154 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. ಸೆಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ.ಮತದಾರರ ನೋಂದಣಿಗಾಗಿ ವಿಶೇಷ ಅಭಿಯಾನವನ್ನು ಸೆಪ್ಟೆಂಬರ್ 20ರವರೆಗೆ ನಡೆಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










