ಸುಳ್ಯ:ಜಿ ಎಲ್ ಆಚಾರ್ಯ ಜುವೆಲ್ಲರ್ಸ್ ಪುತ್ತೂರು ಇವರು ಶಿಕ್ಷಕರ ದಿನಾಚಚರಣೆಯ ಪ್ರಯುಕ್ತ ನೀಡುವ ಆಚಾರ್ಯ ಪುರಸ್ಕಾರಕ್ಕೆ ನಿವೃತ್ತ ಶಿಕ್ಷಕರು ಹಾಗು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಚಂದ್ರಶೇಖರ್ ಪೆರಾಲು ಆಯ್ಕೆಯಾಗಿದ್ದಾರೆ. ಸೆ.5 ರಂದು
ಪುತ್ತೂರು ಜಿ ಎಲ್ ಆಚಾರ್ಯ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಚಂದ್ರಶೇಖರ್ ಪೆರಾಲು ಶಿಕ್ಷಣ ಹಾಗೂ ಸಾಹಿತ್ಯ ಸಂಘಟನಾ ಕ್ಷೇತ್ರದಲ್ಲಿ ಮಾಡಿದ ಸೇವೆಗೆ ಈ ಪ್ರಶಸ್ತಿ ಲಭಿಸಿದೆ.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಆಧ್ಯಕ್ಷರಾಗಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿ ಸದಸ್ಯರಾಗಿ ಮತ್ತು ನೆಹರು ಮೆಮೋರಿಯಲ್ ಕಾಲೇಜಿನ ಆಡಳಿತಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.










