ಸುಳ್ಯ:ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕ ಸಾಹಿತಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಸೆ.5 ರಂದು ನಡೆಯಲಿದೆ.ಸೆ.5 ರಂದು ಬೆಳಿಗ್ಗೆ 8 ಗಂಟೆಗೆ ನಿವೃತ್ತ ವೃತ್ತಿ ಶಿಕ್ಷಕರು ಮತ್ತು
ಸಾಹಿತಿಗಳಾದ ಎಂ.ಟಿ.ಶಾಂತಿಮೂಲೆಯವರಿಗೆ ಪೈಲಾರು ಸ್ವಗೃಹದಲ್ಲಿ ಮತ್ತು ವಿಶ್ರಾಂತ ಪ್ರಾಂಶುಪಾಲರು ಮತ್ತು ಸಾಹಿತಿಗಳು, ಸಂಶೋಧಕರಾದ ಡಾ.ಎಂ.ಪ್ರಭಾಕರ ಶಿಶಿಲರಿಗೆ ಸಂಜೆ 6 ಗಂಟೆಗೆ ಅವರ ಕಾಂತಮಂಗಲ ಮನೆಯಲ್ಲಿ ಗೌರವಾರ್ಪಣೆ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










