ನ್ಯೂಜೆರ್ಸಿ: ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಅರ್ಜೆಂಟೀನಾ ವಿರುದ್ಧ ಸ್ಪೇನ್ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.ಹೆಚ್ಚುವರಿ ಸಮಯದ ದ್ವಿತೀಯಾರ್ಧದಲ್ಲಿ (106ನೇ ನಿಮಿಣ)ಫೆರಾನ್ ಟೊರೆಸ್ ರಿಬೌಂಡ್ ಗಳಿಸಿದ ಗೋಲಿನಿಂದ
ಸ್ಪೇನ್ 1–0ರಿಂದ ಲಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವನ್ನು ಸೋಲಿಸಿ ವಿಶ್ವಕಪ್ ಎತ್ತಿತು. ಯುರೋಪಿಯನ್ ಚಾಂಪಿಯನ್ ಆಗಿರುವ ಸ್ಪೇನ್ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 2010ರಲ್ಲಿ ಸ್ಪೇನ್ ಚಾಂಪಿಯನ್ ಆಗಿತ್ತು.ಸ್ಪೇನ್ ಎದುರು ತಮ್ಮ ಎಂದಿನ ಆಕ್ರಮಣಕಾರಿ ಆಟ ಪ್ರದರ್ಶಿಸಲು ಮೆಸ್ಸಿ ಪಡೆ ಸಂಪೂರ್ಣ ವಿಫಲವಾಯಿತು.ಫ್ರಾನ್ಸ್ ಎದುರು 6–4ರಿಂದ ಗೆದ್ದ
ಇಂಗ್ಲೆಂಡ್ ಮೂರನೇ ಸ್ಥಾನ, ಫ್ರಾನ್ಸ್ ನಾಲ್ಕನೇ ಸ್ಥಾನ ಪಡೆಯಿತು. ಫ್ರಾನ್ಸ್ ತಾರೆ ಕೈಲಿಯನ್ ಎಂಬಾಪೆ ವಿಶ್ವಕಪ್ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾದರು. ಒಟ್ಟು 22 ಗೋಲು ಹೊಡೆದಿರುವ ಅವರು ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ (21) ಅವರನ್ನು ಹಿಂದಿಕ್ಕಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಅವರು 10 ಗೋಲುಗಳೊಂದಿಗೆ ‘ಚಿನ್ನದ ಬೂಟು’ ಪಡೆದರು.








