ಸುಳ್ಯ:ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ವತಿಯಿದ ಸುಳ್ಯ ತಾಲೂಕಿನ 18 ವರ್ಷ ವಯೋಮಾನದ ಒಳಗಿನ ಮತ್ತು 13 ವರ್ಷ ಕ್ಕಿಂತ ಮೇಲ್ಪಟ್ಟ ಬಾಲಕ, ಬಾಲಕಿಯರಿಗಾಗಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಭವನದ ಬಳಿಯ ಕ್ರೀಡಾಂಗಣದಲ್ಲಿ ವಾಲಿಬಾಲ್ ತರಬೇತಿ ಶಿಬಿರ ಆರಂಭಗೊಂಡಿತು. ಶಿಬಿರ

8 ದಿನಗಳ ಕಾಲ 2 ಅವಧಿಗಳಲ್ಲಿ ಮುಂಜಾನೆ 5.50 ಮತ್ತು ಸಂಜೆ 4 ರಿಂದ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ನ ಅಧ್ಯಕ್ಷ ದೊಡ್ಡಣ್ಣ ಬರಮೇಲು ಗೌರವಾಧ್ಯಕ್ಷ ಎಸ್.ಸಂಶುದ್ದೀನ್,ತರಬೇತುದಾರರಾದ ಮನೋಜ್ ಅಡ್ಕಾರ್, ಅಸೋಸಿಯೇಶನ್ ಕೊಶಾದಿಕಾರಿ ಕೆ.ಬಿ.ಇಬ್ರಾಹಿಂ, ದೈಹಿಕ ಶಿಕ್ಷಕರಾದ ಕೊರಗಪ್ಪ ಅಡ್ಕಾರ್, ರಾಜೀವಿ ಶೆಟ್ಟಿ ಹಾಗೂ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಜಯನಗರ ಉಪಸ್ತಿತರಿದ್ದರು. ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು ಸ್ವಾಗತಿಸಿ ಮಂದಿಸಿದರು. ರಾಷ್ಟ್ರೀಯ ವಾಲಿಬಾಲ್ ಪಂದ್ಯಾಕೂಟದ ಉಳಿಕೆ ಹಣದಿಂದ ಶಿಬಿರ ಸಂಘಟಿಸಲಾಗುತ್ತದೆ ಎಂದು ತಾಲೂಕು ವಾಲಿಬಾಲ್ ಅಸೋಸಿಯೇಶನ್ನ ಅಧ್ಯಕ್ಷ ದೊಡ್ಡಣ್ಣ ಬರಮೇಲು ತಿಳಿಸಿದ್ದಾರೆ.