ಹೈದರಾಬಾದ್: ಹೈದರಾಬಾದ್ನ ಸ್ಪೇಸ್–ಟೆಕ್ ಸಾರ್ಟ್ಆಪ್ ‘ಸ್ಕೈರೂಟ್ ಏರೊಸ್ಪೇಸ್’ ನಿರ್ಮಿಸಿದ ‘ವಿಕ್ರಮ್-1’ ರಾಕೆಟ್ ಅನ್ನು ಶನಿವಾರ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ
ಮಧ್ಯಾಹ್ನ 12.05ಕ್ಕೆ ರಾಕೆಟ್ ನಭಕ್ಕೆ ಚಿಮ್ಮಿತು. ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ಕಕ್ಷೀಯ ರಾಕೆಟ್ ಇದಾಗಿದೆ.ವಿಕ್ರಮ್–1 ಬಹುಹಂತದ ಉಡಾವಣಾ ವಾಹನವಾಗಿದ್ದು, 350 ಕೆ.ಜಿ. ತೂಕದ ಸಣ್ಣ ಉಪಗ್ರಹಗಳನ್ನು ಭೂಮಿಯ ಕೆಳಹಂತದ ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದೇ ಕರೆಯಲ್ಪಡುವ ‘ವಿಕ್ರಮ್ ಸಾರಾಭಾಯ್’ ಅವರ ಹೆಸರನ್ನು ಈ ರಾಕೆಟ್ಗೆ (ವಿಕ್ರಮ್-1) ಇಡಲಾಗಿದೆ.








