ಸುಳ್ಯ: ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರ ಮೇಲೆ ಗಡಿಪಾರು ನೋಟೀಸ್ ಜಾರಿ ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸುಳ್ಯ ವತಿಯಿಂದ ಪ್ರತಿಭಟನೆ ಸುಳ್ಯ ತಾಲೂಕು ಕಛೇರಿ ಬಳಿ ನಡೆಯಿತು. ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ ‘ಗೋ ರಕ್ಷಣೆ, ಹೆಣ್ಣುಮಕ್ಕಳ ರಕ್ಷಣೆ, ದೇಶಕ್ಕಾಗಿ ಕೆಲಸ ಮಾಡುತ್ತಿರುವ ಹಿಂದೂ ಕಾರ್ಯಕರ್ತರ ಗಡಿಪಾರು ಪ್ರಯತ್ನ ಖಂಡನೀಯ. ಸರಕಾರ ಗಡಿಪಾರು ಆದೇಶವನ್ನು
ತಕ್ಷಣ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು. ಸುಳ್ಯ ನ.ಪಂ.ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಸರಕಾರ ಹಿಂದೂ ಕಾರ್ಯಕರ್ತರ ಗಡಿಪಾರಿಗೆ ನೋಟೀಸ್ ನೀಡಿರುವುದು ದುರದೃಷ್ಟಕರ. ಹಿಂದುತ್ವ ಉಳಿದಲ್ಲಿ ಮಾತ್ರ ದೇಶಕ್ಕೆ ಭವಿಷ್ಯ. ಹಿಂದೂ ಕಾರ್ಯಕರ್ತರನ್ನು ಬೆದರಿಸುವ ಕೆಲಸಕ್ಕೆ ಮುಂದಾಗಬೇಡಿ ಎಂದರು. ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮತ್ತಿತರರು ಮಾತನಾಡಿದರು.
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ಸಂಚಾಲಕ ಹರಿಪ್ರಸಾದ್ ಬಿ.ವಿ, ಪ್ರಮುಖರಾದ ಸುಭೋದ್ ರೈ ಮೆನಾಲ, ಮಹೇಶ್ ಕುಮಾರ್ ರೈ ಮೆನಾಲ, ಚನಿಯ ಕಲ್ತಡ್ಕ, ರಾಧಾಕೃಷ್ಣ ಬೂಡು, ಗುಣವತಿ ಕೊಲ್ಲಂತ್ತಡ್ಕ, ಪುಷ್ಪಾ ಮೇದಪ್ಪ, ನಮಿತಾ ರಾವ್, ಬುದ್ಧ ನಾಯ್ದ್, ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ಶಶಿಕಲಾ ನೀರಬಿದಿರೆ, ಜಿನ್ನಪ್ಪ ಪೂಜಾರಿ,ಅಶೋಕ್ ಅಡ್ಕಾರ್, ಸುದರ್ಶನ ಪಾತಿಕಲ್ಲು, ಭಾನುಪ್ರಕಾಶ್ ಪೆರುಮುಂಡ, ವರ್ಷಿತ್ ಚೊಕ್ಕಾಡಿ, ಮಧುಸೂದನ, ಸನತ್, ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.