ಸುಳ್ಯ:ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚ್ಚೇರಿಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸಂಭ್ರಮಾಚರಣೆ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ನಡೆಯಿತು.ದೇಶದ ಆಡಳಿತ ವ್ಯವಸ್ಥೆಗೆ ದಿಕ್ಸೂಚಿಯಾದ ಚುನಾವಣಾ ಫಲಿತಾಂಶ ಇದು.ನರೇಂದ್ರ ಮೋದಿ ಆಡಳಿತಕ್ಕೆ ಸಿಕ್ಕಿದ ಮನ್ನಣೆ ಎಂದು
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.ಶಾಸಕಿ
ಭಾಗೀರಥಿ ಮುರುಳ್ಯ, ಮಾಜಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ,ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಪ್ರಮುಖರಾದ ಸುನಿಲ್ ಕೇರ್ಪಳ, ವಿಕ್ರಮ್ ಅಡ್ಪಂಗಾಯ, ನಾರಾಯಣ ಎಸ್.ಎಂ ಶಾಂತಿನಗರ, ಚನಿಯ ಕಲ್ತಡ್ಕ, ಶಶಿಕಲಾ ನೀರಬಿದಿರೆ, ಪುಷ್ಪಾ ಮೇದಪ್ಪ, ಹರಿಣಾಕ್ಷಿ ನಾರಾಯಣ, ದಿವ್ಯಾ ಮಡಪ್ಪಾಡಿ, ದಾಮೋದರ ಮಂಚಿ, ಬೂಡು ರಾಧಾಕೃಷ್ಣ ರೈ,ಸುರೇಶ್ ನಾಯಕ್, ಜಿನ್ನಪ್ಪ ಪೂಜಾರಿ, ಜಗನ್ನಾಥ ಜಯನಗರ, ವಿಜಯ ಆಲಡ್ಕ, ಪ್ರಸಾದ್ ಕಾಟೂರು,,ಶ್ರೀಕೃಷ್ಣ ಎಂ.ಆರ್,ಅವಿನಾಶ್ ಕುರುಂಜಿ, ಜಗದೀಶ್ ಸರಳಿಕುಂಜ, ಅಶೋಕ್ ಅಡ್ಕಾರ್, ಶಿವಾನಂದ ರಂಗತ್ತಮಲೆ, ರಾಜೇಶ್ ಶೆಟ್ಟಿ, ಮೇನಾಲ, ಸೋಮನಾಥ ಪೂಜಾರಿ, ಚಂದ್ರಶೇಖರ ನೆಡಿಲು, ಶಿವರಾಮ ಕೇರ್ಪಳ ಮತ್ತಿತರರು ಇದ್ದರು.












