ಸುಳ್ಯ:ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ನೂತನ ಅಧ್ಯಕ್ಷರಾಗಿ ಕಲ್ಲಪಳ್ಳಿಯ ಶ್ರೀಕಾಂತ್ ಗೋಳ್ವಾಲ್ಕರ್ ಆಯ್ಕೆಯಾಗಿದ್ದಾರೆ.
ಪುತ್ತೂರಿನ ಕಲ್ಲಾರೆ ರಾಘವೇಂದ್ರ ಮಠದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಪ್ರಮುಖರ ಸಭೆಯಲ್ಲಿ ವಿಎಚ್ಪಿ ಸುಳ್ಯ ಪ್ರಖಂಡದ ನೂತನ ಅಧ್ಯಕ್ಷರ ಘೋಷಣೆ ಮಾಡಲಾಯಿತು. ಸೋಮಶೇಖರ ಪೈಕ ಅವರು
ವಿಹಿಂಪ ಅಧ್ಯಕ್ಷರಾಗಿದ್ದು ತೆರವಾದ ಸ್ಥಾನಕ್ಕೆ ಶ್ರೀಕಾಂತ್ ರವರನ್ನು ಆಯ್ಕೆ ಮಾಡಲಾಗಿದೆ. ಶ್ರೀಕಾಂತ್ ಅವರು ಕೃಷಿಕರಾಗಿದ್ದು ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದಾರೆ.
ವಿಶ್ವ ಹಿಂದೂ ಪರಿಷತ್ ಆಲೆಟ್ಟಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಕಲ್ಲಪಳ್ಳಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿದ್ದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ.