ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಳ ತಾಲೂಕು ಇದರ ವತಿಯಿಂದ ಬಡ್ಡಡ್ಕದ ಕೂರ್ನಡ್ಕ ಎಂಬಲ್ಲಿ ತೇಜಕುಮಾರಿಯವರಿಗೆ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷ ಲೋಕನಾಥ್ ಅಮೆಚೂರು ನಾಮಫಲಕವನ್ನು ಅನಾವರಣಗೊಳಿಸಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ
ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎನ್.ಎ. ರಾಮಚಂದ್ರ ವಾತ್ಸಲ್ಯ ಮನೆಯ ಹೂವಿನ ಹಾರವನ್ನು ಬಿಡಿಸುವುದರೊಂದಿಗೆ ಶುಭ ಹಾರೈಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಅವರು ವಾರಿಸುದಾರರಿಗೆ ಮನೆಯನ್ನು ಹಸ್ತಾಂತರ ಮಾಡಿದರು.
ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಶುಭ ಹಾರೈಸಿದರು.ಅಮರ ಕಲಾ ಹಾಗೂ ಕ್ರೀಡಾ ಸಂಘದ ವತಿಯಿಂದ ನೀಡಿದ ನೀರಿನ ಟ್ಯಾಂಕ್ ಹಾಗೂ ನೀರಿನ ವ್ಯವಸ್ಥೆಯ ಉದ್ಘಾಟನೆಯನ್ನು ದೀಪಶ್ರೀ ಆಶ್ರಮದ ಸಮಾಜಸೇವಕರಾದ ಉಮೇಶ್ ನಾಯಕ್ ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಡ್ಡಡ್ಕ ಒಕ್ಕೂಟದ ಅಧ್ಯಕ್ಷೆ ವಿಮಲಾಕ್ಷಿ ವಹಿಸಿದ್ದರು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಬೂಡು ರಾಧಕೃಷ್ಣ ರೈ, ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ರೈ ಮೇನಾಲ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಪದ್ಮನಾಭ ಜೈನ್, ಅಯ್ಯಪ್ಪ ಭಜನಾ ಮಂದಿರ ಬಡ್ಡಡ್ಕ ಅಧ್ಯಕ್ಷ ದಿನೇಶ್ ಬಡ್ಡಡ್ಕ, ಸುಳ್ಯ ವಲಯ ಅಧ್ಯಕ್ಷರು ಮನೋಹರ್ ಸುಳ್ಯ, ಬಡ್ಡಡ್ಕ ಒಕ್ಕೂಟ ಸ್ಥಾಪಕ ಅಧ್ಯಕ್ಷ ದೇವಿ ಪ್ರಸಾದ್ ಬಡ್ಡಡ್ಕ, ಕಲ್ಲಪಲ್ಲಿ ಒಕ್ಕೂಟ ಅಧ್ಯಕ್ಷೆ ಶೀಲಾವತಿ ಕಲ್ಲಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿಕಟಪೂರ್ವ ಅಧ್ಯಕ್ಷರು ಜಗದೀಶ್ ಕಲ್ಲಪಳ್ಳಿ, ಬಡ್ಡಡ್ಕ ಒಕ್ಕೂಟದ ಉಪಾಧ್ಯಕ್ಷೆ ಆಶಾಲತಾ ಆಡಿಂಜ , ಬಡ್ಡಡ್ಕ ಒಕ್ಕೂಟ ಕೋಶಾಧಿಕಾರಿ ಅಶೋಕ ಮೂಲೆಬಡ್ಡಡ್ಕ, ಒಕ್ಕೂಟದ ಜೊತೆ ಕಾರ್ಯದರ್ಶಿ ಪವಿತ್ರ ಅನ್ನಪೂರ್ಣ ಎಲೆಕ್ಟ್ರಿಕಲ್ಸ್ ಮಾಲಕರಾದ ಮಧು ಕಿರಣ್ ಬಡ್ಡಡ್ಕ , ಆಲೆಟ್ಟಿ ಕೋಲ್ಚರ್ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಕೊಲ್ಚಾರು, ಹಾಗೂ ಕಲ್ಲಪಳ್ಳಿ ಬಡ್ಡಡ್ಕ,ಆಲೆಟ್ಟಿ ಕೊಲ್ಚಾರು ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು, ಜ್ಞಾನ ವಿಕಾಸ ಸಮನ್ವಧಿಕಾರಿ ಲಕ್ಷ್ಮಿ ಉಪಸ್ಥಿತರಿದ್ದರು.ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.ಬಡ್ಡಡ್ಕ ಒಕ್ಕೂಟದ ಸೇವಾ ಪ್ರತಿನಿಧಿ ಶಕುಂತಲಾ ವರದಿ ಮಂಡನೆ ಮಾಡಿದರು. ಜಯಪ್ರಕಾಶ್ ಕಲ್ಲಪಳ್ಳಿ ಕಾರ್ಯಕ್ರಮ ನಿರೂಪಿಸಿದರು.