ಸುಳ್ಯ: ಅಂತಾರಾಜ್ಯ ಸಂಪರ್ಕಿಸುವ ಸುಳ್ಯ ಆಲೆಟ್ಟಿ – ಬಡ್ಡಡ್ಕ – ಕೂರ್ನಡ್ಕ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 7 ಕೋಟಿ ರೂ ಅನುದಾನ ಬಿಡುಗಡೆಗೊಂಡಿದೆ. ಅನುದಾನ ಬಿಡುಗಡೆ ಮಾಡಲು ಶಿಫಾರಸ್ಸು ಮಾಡಿದ್ದ ಸಚಿವ ಯು.ಟಿ.ಖಾದರ್ ಅವರನ್ನು ಸುಳ್ಯದ
ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಯು. ಟಿ. ಖಾದರ್ ಅವರು ರಸ್ತೆಗೆ ಅನುದಾನ ಬಿಡುಗಡೆ ಮಾಡಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ಅವರಿಗೆ ಶಿಫಾರಸ್ಸು ಮಾಡಿದ್ದರು.ಈ ಹಿನ್ನಲೆಯಲ್ಲಿ ಸುಳ್ಯ ಕಾಂಗ್ರೆಸ್ ಮುಖಂಡರು ಯು. ಟಿ. ಖಾದರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ಮುಖಂಡರಾದ ಪಿ. ಸಿ. ಜಯರಾಮ್, ಪಿ. ಎಸ್. ಗಂಗಾಧರ, ತೇಜಕುಮಾರ್ ಬಡ್ಡಡ್ಕ, ಸತ್ಯಕುಮಾರ್ ಆಡಿಂಜ, ಎಸ್. ಸಂಶುದ್ದೀನ್, ಮೂಸ ಕುಂಞಿ ಪೈoಬಚ್ಚಾಲ್,ಶಾಫಿ ಕುತ್ತಮೊಟ್ಟೆ,ಶರೀಫ್ ಕಂಠಿ, ಪ್ರಸನ್ನ ಕುಮಾರ್ ಆಲೆಟ್ಟಿ, ಶಹೀದ್ ಪಾರೆ ಮೊದಲಾದವರು ಉಪಸ್ಥಿರಿದ್ದರು.








