ಕೋಝಿಕೋಡ್: ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ಟಿ.ಎಂ.ಶಾಹೀದ್ ತೆಕ್ಕಿಲ್ ಅವರು ಕೋಝಿಕ್ಕೋಡ್ನಲ್ಲಿ ಕೆ ಪಿ.ಸಿ.ಸಿ ಅಧ್ಯಕ್ಷ , ಸಂಸದ ಕೆ. ಸುಧಾಕರನ್ ಅವರನ್ನು ಭೇಟಿಯಾದರು. ಗಡಿನಾಡು ಕಾಸರಗೋಡಿನ ಸ್ಥಳೀಯಾಡಳಿತ ಮತ್ತು ವಿಧಾನಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ ಗೆಲುವಿನ ಕುರಿತು ಮತ್ತು ಪಕ್ಷ ಸಂಘಟನೆಗೆ ಕರ್ನಾಟಕದ ಸಹಾಯದ ಕುರಿತು ಚರ್ಚೆ ನಡೆಸಲಾಯಿತು ತಿಳಿದು ಬಂದಿದೆ.ಕೇರಳದಲ್ಲಿ ಮುಂಬರುವ ಸ್ಥಳೀಯಾಡಳಿತ ಚುನಾವಣೆಗೆ ಇನ್ನು ಕೆಲವೇ ತಿಂಗಳು ಉಳಿದಿದ್ದರೆ , 2026ರಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ಈ ಕಾರಣದಿಂದ ಕರ್ನಾಟಕ -ಕೇರಳದ ಗಡಿಭಾಗದ ಚುನಾವಣಾ ಪ್ರಕ್ರಿಯೆಗೆ ಕರ್ನಾಟಕ ಕಾಂಗ್ರೆಸ್ನ ಸಹಾಯವನ್ನು ಕೇರಳ ಬಯಸಿದ್ದು, ಈ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಟಿ.ಎಂ.ಶಹೀದ್ ತಿಳಿಸಿದ್ದಾರೆ.