ಅಮೇರಿಕ:ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ ಆರಂಭವಾಗಲಿದೆ. ಜೂನ್ 2 ರಿಂದ ಪ್ರಾರಂಭವಾಗುವ ವಿಶ್ವಕಪ್ಗೂ ಮೊದಲು ಹಲವು ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ಇದರಲ್ಲಿ ಟೀಂ ಇಂಡಿಯಾ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದರ ನಂತರ ಲೀಗ್ ಪ್ರಾರಂಭವಾಗುತ್ತದೆ. ಹೀಗಾಗಿ ಈ ಮಿನಿ ವಿಶ್ವಸಮರದಲ್ಲಿ ಭಾರತ
ತಂಡದ ಪಂದ್ಯಗಳು ಯಾವಾಗ ನಡೆಯಲ್ಲಿವೆ.ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಜೂನ್ 1 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಭಾರತ ತಂಡದ ಏಕೈಕ ಅಭ್ಯಾಸ ಪಂದ್ಯ ನ್ಯೂಯಾರ್ಕ್ನ ನಸ್ಸೌ ಕೌಂಟಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮಾಡ್ಯುಲರ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದಾದ ಬಳಿಕ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 5 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಟೀಂ ಇಂಡಿಯಾ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ಭಾರತ ಹೊರತಾಗಿ ಕೆನಡಾ, ಐರ್ಲೆಂಡ್, ಪಾಕಿಸ್ತಾನ ಮತ್ತು ಅಮೆರಿಕ ತಂಡಗಳು ಸ್ಥಾನ ಪಡೆದಿವೆ.ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದರ ನಂತರ
ಜೂನ್ 12 ರಂದು ಯುಎಸ್ಎ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಪಂದ್ಯಗಳು ನಡೆಯಲಿವೆ. ಗುಂಪಿನ ಎಲ್ಲಾ ತಂಡಗಳು ಪರಸ್ಪರ ವಿರುದ್ಧವಾಗಿ ಆಡುತ್ತವೆ. ಈಗಾಗಲೇ ಹಲವು ಭಾರತೀಯ ಆಟಗಾರರು ವಿಶ್ವಕಪ್ಗಾಗಿ ಅಮೆರಿಕ ತಲುಪಿದ್ದಾರೆ. ಕೆಲವು ಆಟಗಾರರು ಎರಡನೇ ಬ್ಯಾಚ್ನಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ
ಟಿ20 ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನ ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತದೆ. ಇದಲ್ಲದೆ, ಇದನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಚಾನಲ್ಗಳಲ್ಲಿ ಟಿವಿಯಲ್ಲಿ ನೋಡಬಹುದು. .
ಈ ವಿಶ್ವಕಪ್ನಲ್ಲಿ ಒಟ್ಟು 16 ಅಭ್ಯಾಸ ಪಂದ್ಯಗಳನ್ನು ಮೇ 27 ರಿಂದ ಆಡಲಾಗುತ್ತದೆ. ಹೆಚ್ಚಿನ ತಂಡಗಳು ಮುಖ್ಯ ಸ್ಪರ್ಧೆಯ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ನ್ಯೂಜಿಲೆಂಡ್ ಅಭ್ಯಾಸ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದೆ. ಆದರೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಅಭ್ಯಾಸ ಪಂದ್ಯಗಳನ್ನು ಬಿಟ್ಟು ನೇರವಾಗಿ ಪಂದ್ಯಾವಳಿಗೆ ಪ್ರವೇಶಿಸಲಿವೆ. ಪ್ರಸ್ತುತ ಉಭಯ ತಂಡಗಳ ನಡುವೆ ನಾಲ್ಕು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ.