ನವದೆಹಲಿ: ಸೂರ್ಯಕುಮಾರ್ ಯಾದವ್ ಅವರನ್ನು, ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳ 23ರಂದು ಆರಂಭವಾಗುವ ಐದು ಪಂದ್ಯಗಳ ಟಿ–20 ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ವಿಶ್ವಕಪ್ನಲ್ಲಿ ಆಡಿದ ಬಹುತೇಕ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಮೂವರು ಆಟಗಾರರು
ಈ ತಂಡಕ್ಕೂ ಆಯ್ಕೆಯಾಗಿದ್ದಾರೆ. ಸೂರ್ಯಕುಮಾರ್ ಜೊತೆಗೆ ವಿಶ್ವಕಪ್ ತಂಡಲ್ಲಿದ್ದ ಪ್ರಸಿದ್ಧಕೃಷ್ಣ ಮತ್ತು ಇಶಾನ್ ಕಿಶನ್ ಅವರು ಈ ಸರಣಿಯಲ್ಲಿ ಆಡಲಿದ್ದಾರೆ. ಆರಂಭ ಆಟಗಾರ ಋತುರಾಜ್ ಗಾಯಕವಾಡ್ ಅವರು ಉಪನಾಯಕರಾಗಿದ್ದಾರೆ. ಆದರೆ ಕೊನೆಯ ಎರಡು ಪಂದ್ಯಗಳಿಗೆ (ನ. 28ರಂದು ರಾಯ್ಪುರ ಮತ್ತು ಡಿ. 3 ರಂದು ಬೆಂಗಳೂರು) ಶ್ರೇಯಸ್ ಅಯ್ಯರ್ ಆವರು ಉಪನಾಯಕರಾಗಲಿದ್ದಾರೆ.
ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್.