ಚಿತ್ರ-ಬರಹ:ಡಾ.ಸುಂದರ ಕೇನಾಜೆ.
ಸದಾ ಬೆಳಕಿನೊಂದಿಗೆ ಸಂಭ್ರಮವಲ್ಲದೆ ನಾನಾ ಅರ್ಥಗಳಲ್ಲಿ ವಿಶ್ಲೇಷಣೆಗೆ ಒಳಗಾದ ಈತ ನಾವು ನೀವು ಬಿಡಿ, ಈ ಭೂಮಿ ಹುಟ್ಟುವ ಮೊದಲೇ ಹುಟ್ಟಿದವ. ಕೊಟ್ಯಾಂತರ ಹಗಲು ರಾತ್ರಿಯನ್ನು ಸೃಷ್ಟಿಸಿದ ಈ ಸೂರ್ಯನ ಈ ವರ್ಷದ ಕೊನೆಯ ಉದಯ ಮತ್ತು ಅಸ್ತವಿದು. ಇನ್ನು ಎಂದೆಂದೂ

ಮತ್ತೆ ಈ ವರ್ಷ ಹುಟ್ಟಲಾರ….. ಮುಳುಗಲಾರ….. ಹೀಗೆ.. ಕತ್ತಲೆಯ ಕಳೆದ ಸದಾ ಹುಟ್ಟು ಪಡೆದು ನಿತ್ಯ ನಿರಂತರನಾಗುವ ಸೂರ್ಯನಂತೆ ನಮ್ಮ ಬದುಕು ನಿತ್ಯ ನೂತನವಾಗಿರಲಿ ನಾಳಿನ ಹೊಸ ಸೂರ್ಯನನ್ನು ಕಾಣುವ ಮುನ್ನ ಈ ಹಳಬನಿಗೆ ಪ್ರೀತಿಯ ವಿದಾಯ…..!
ಸುಳ್ಯದ ಶಾಂತಿನಗರದ ಕ್ರೀಡಾಂಗಣದ ಬಳಿಯಿಂದ ಕ್ಲಿಕ್ಕಿಸಿದ ಇಂದಿನ ಸೂರ್ಯೋದಯ ಹಾಗೂ ಸೂರ್ಯಾಸ್ತಮಯದ ಕೆಲವು ಚಿತ್ರಗಳು.. ಈ ವರ್ಷದ ಕೊನೆಯ ರವಿಯನ್ನು ಕಣ್ತುಂಬಿಕೊಳ್ಳಿ..
ಚಿತ್ರಗಳು:ಡಾ.ಸುಂದರ ಕೇನಾಜೆ


