ಸುಳ್ಯ:ಹೊಸ ವರ್ಷ 2025 ಸ್ವಾಗತಿಸಲು ವಿಶ್ವದಾದ್ಯಂತ ಜನ ತುದಿಗಾಲ ಮೇಲೆ ನಿಂತಿದ್ದಾರೆ. ಈಗಾಗಲೇ ಕೆಲವು ದೇಶಗಳಲ್ಲಿ ಹೊಸ ವರ್ಷ ಬಂದಾಗಿದೆ.ಫೆಸಿಫಿಕ್ ಸಾಗರದ ಕಿರಿಬತಿ ಎಂಬ ದ್ವೀಪ ರಾಷ್ಟ್ರ 2025ರ ಹೊಸ ವರ್ಷವನ್ನು ಮೊದಲು ಸ್ವಾಗತಿಸಿತು. ನಂತರ ಅದರ ಸನಿಹದ ನ್ಯೂಜಿಲ್ಯಾಂಡ್ ಹೊಸ ವರ್ಷವನ್ನು ಸ್ವಾಗತಿಸಿದವು.ಆ ನಂತರ
ಆಸ್ಟ್ರೇಲಿಯಾ, ಜಪಾನ್ ಹಾಗೂ ದಕ್ಷಿಣ ಕೊರಿಯಾ ಹೊಸ ವರ್ಷ ಸ್ವಾಗತಿಸಿದವು. ಆಸ್ಟ್ರೇಲಿಯಾದ ನಗರ ಸಿಡ್ನಿಯ ಒಪೆರಾ ಹೌಸ್ ಬಳಿ ಚಿತ್ತಾಕರ್ಷಕ ಬಾಣ ಬಿರುಸುಗಳನ್ನು ಸಿಡಿಸಿ ಸ್ವಾಗತ ಮಾಡಲಾಯಿತು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

ರಷ್ಯಾದಲ್ಲಿ 2025ರ ಸ್ವಾಗತಕ್ಕೆ ಕ್ಷಣಗಣನೆವಿಶ್ವದ ಅನೇಕ ಪ್ರವಾಸಿ ತಾಣಗಳಲ್ಲಿ 2023ರ ಸೂರ್ಯಾಸ್ತವನ್ನು ಕಣ್ತುಂಬಿಕೊಂಡು ಹೊಸ ವರ್ಷ ಸ್ವಾಗತಿಸಲು ಕಾತರರಾಗಿದ್ದಾರೆ. ರಾತ್ರಿಯಿಡಿ ಸಂಭ್ರಮಾಚರಣೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಭಾರತದಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿದೆ. ಪ್ರವಾಸಿ ತಾಣಗಳು, ಹೋಟೆಲ್, ರೆಸಾರ್ಟ್, ರೆಸ್ಟೊರಂಟ್ಗಳು ತುಂಬಿ ತುಳುಕುತ್ತಿವೆ.