ಸುಳ್ಯ:ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸುಳ್ಯ ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ
54ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾದಲ್ಲಿ ಅ.6ರಂದು
ಅದ್ದೂರಿ ಸಂಗೀತ ರಸಮಂಜರಿ ಮ್ಯೂಸಿಕ್ ಹಂಗಾಮ ನಡೆಯಿತು. ಶ್ರೀ ಶಾರದಾಂಬ ಕಲಾ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯ ದಿನ ಶ್ರುತಿ ಗಾಯನ ಮೆಲೋಡಿಸ್ ಅರ್ಪಿಸುವ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಸರಿಗಮಪ ಜೂರಿ ಪ್ಯಾನಲ್ ನಿರ್ಣಾಯಕರಾದ ಅಜಯ್ ವಾರಿಯರ್, ಸರಿಗಮಪ ಖ್ಯಾತಿಯ ಪೃಥ್ವಿ ಭಟ್, ಅಖಿಲ ಪಜಿಮಣ್ಣು, ಎದೆತುಂಬಿ ಹಾಡುವೆನು ಖ್ಯಾತಿಯ ಪಲ್ಲವಿ ಪ್ರಭು, ಸ್ಟಾರ್ ನೈಟ್ ಸರದಾರ ಸುಪ್ರೀತ್ ಸಪಲಿಗ ಮತ್ತಿತರ ಖ್ಯಾತ ಗಾಯಕರ ಸಮಾಗಮದಲ್ಲಿ ಅದ್ದೂರಿ ಸಂಗೀತ ರಸಮಂಜರಿ ನಡೆಯಿತು.
ನೂರಾರು ಮಂದಿ ಆಗಮಿಸಿ ಸಂಗೀತ ರಸಮಂಜರಿ ಆಸ್ವಾದಿಸಿದರು. ಅದ್ದೂರಿ ರಸಮಂಜರಿಯೊಂದಿಗೆ ದಸರಾ ಸಾಂಸ್ಕೃತಿಕ ಉತ್ಸವ ಸಂಪನ್ನಗೊಂಡಿತು. ರಾತ್ರಿ ಶ್ರೀದೇವಿಗೆ ವಿಶೇಷ ಅಲಂಕಾರದೊಂದಿಗೆ ವೈಭವದ ಮಹಾಪೂಜೆ ನಡೆಯಿತು.















