ಸುಳ್ಯ:ಸುಳ್ಯ ತಾಲೂಕು ಕೃಷಿಕ ಸಮಾಜದ ತ್ರೈ ಮಾಸಿಕ ಸಭೆ ಅಧ್ಯಕ್ಷರಾದ ಎ. ಟಿ. ಕುಸುಮಾಧರ ಅವರ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆಯ ಸಭಾಭವನದಲ್ಲಿ ನಡೆಯಿತು.ಈ ವರ್ಷದ ಕೃಷಿ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಭತ್ತ ಕೃಷಿಗೆ ಸರಕಾರದಿಂದ ದೊರೆಯುವ ಸವಲತ್ತುಗಳು, ಬಿತ್ತನೆ ಬೀಜ, ಕ್ರಿಮಿನಾಶಕಗಳ ಬಗ್ಗೆ
ಮಾಹಿತಿ ಹಂಚಿಕೊಳ್ಳಲಾಯಿತು. ಭತ್ತದ ಕೃಷಿಯನ್ನು ವಿಸ್ತರಿಸಲು ಹೆಚ್ಚು ಪ್ರೋತ್ಸಾಹ ನೀಡಲು ನಿರ್ಧರಿಸಲಾಯಿತು. ಈ ವೇಳೆ ಕೃಷಿಕ ಸಮಾಜಕ್ಕೆ ನಿವೇಶನ ಒದಗಿಸಲು ಎಪಿಯಂಸಿ ಮತ್ತು ತಹಿಶಿಲ್ದಾರ್ ಅವರಿಗೆ ಮನವಿ ನೀಡಲು ನಿರ್ಧರಿಸಲಾಯಿತು. ತೋಟಗಾರಿಕಾ ಇಲಾಖೆ,ಪಶುಸಂಗೋಪನೆ ಇಲಾಖೆ, ಎಪಿಎಂಸಿ ಅಧಿಕಾರಿಗಳು ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ. ಟಿ, ನಿರ್ದೇಶಕರಾದ ಚಂದ್ರಾ ಕೋಲ್ಚರ್, ಅಣ್ಣಾಜಿ ಗೌಡ, ಕುಮಾರಸ್ವಾಮಿ,ರುಕ್ಮಯ್ಯ ಗೌಡ, ಮನ್ಮಥ ಎ. ಯಸ್, ಸವಿನ್ ಕೊಡಪಾಲ, ಉಮಾನಾಥ ಪಟೇಲ್ ಮನೆ,ಸುಧಾಕರ ಪ್ರಭು ಚರ್ಚೆಯಲ್ಲಿ ಭಾಗವಹಿಸಿದ್ದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಸ್ವಾಗತಿಸಿ, ವಂದಿಸಿದರು.