ನಾಗಮಂಗಲ: ತಾಲ್ಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ‘ಶ್ರೀಗುರು ಭೈರವೈಕ್ಯ ಮಂದಿರ’ವನ್ನು ಏ.15ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಬೆಳಿಗ್ಗೆ 10ಕ್ಕೆ ಬೆಂಗಳೂರಿನಿಂದ
ಹೆಲಿಕಾಪ್ಟರ್ ಮೂಲಕ ಕ್ಷೇತ್ರಕ್ಕೆ ಬರಲಿದ್ದು, ಗುರು ಗೋರಖನಾಥರು ತಪಸ್ಸು ಮಾಡಿದ್ದ ಜ್ವಾಲಾಪೀಠ ದರ್ಶನ ಮಾಡಿ, ಕ್ಷೇತ್ರಪಾಲಕ ಕಾಲಭೈರವನಿಗೆ ಮಂಗಳಾರತಿ ಸಲ್ಲಿಸುವರು. ಗುರು ಭೈರವೈಕ್ಯ ಮೂಲಮಂದಿರದಲ್ಲಿ ಪೂಜೆ ಸಲ್ಲಿಸಿ ದೇವಾಲಯ ಉದ್ಘಾಟಿಸುವರು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ.ಕ್ಷೇತ್ರವು ಮಯೂರವನ ಎಂದೇ ಪ್ರಸಿದ್ಧವಾಗಿರುವುದರಿಂದ, ನವಿಲಿಗೆ ಸಂಬಂಧಿಸಿದ ಕಾಣಿಕೆ ನೀಡಲು ಮಠ ಸಜ್ಜಾಗಿದೆ. ಮೈಸೂರು ಒಡೆಯರು ಧರಿಸುತ್ತಿದ್ದ ಮಾದರಿಯ ಕೆಂಪು ಪೇಟವನ್ನೂ ಇದೇ ಸಂದರ್ಭದಲ್ಲಿ ನೀಡಲಾಗುವುದು.
















