ದಂಬುಲ್ಲಾ: ಶ್ರೀಲಂಕಾ ‘ಎ’ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ ‘ಎ’ ತಂಡವು ಸೂಪರ್ ಓವರ್ನಲ್ಲಿ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ‘ ತಂಡವು 49.2 ಓವರ್ಗಳಲ್ಲಿ 265 ರನ್ಗೆ ಆಲೌಟ್ ಆಯಿತು.
ಆರಂಭಿಕ ಆಟಗಾರರಾದ
ಪ್ರಭಸಿಮ್ರನ್ ಸಿಂಗ್(11 ರನ್: 13 ಎಸೆತ) ಮತ್ತು ವೈಭವ್ ಸೂರ್ಯವಂಶಿ(21 ರನ್: 14 ಎಸೆತ) ವಿಕೆಟ್ಗಳನ್ನು ಬೇಗನೇ ಕಳೆದುಕೊಂಡಿತು.ಋತುರಾಜ್ ಗಾಯಕ್ವಾಡ್(37 ರನ್), ತಿಲಕ್ ವರ್ಮಾ (23 ರನ್) ಕೂಡ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. 143 ರನ್ಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ ಎ ತಂಡಕ್ಕೆ ಸೂರ್ಯಾಂಶ್ ಶೆಡ್ಜೆ (72 ರನ್: 66 ಎಸೆತ), ವಿಪ್ರಜ್ ನಿಗಮ್ (51 ರನ್: 49 ಎಸೆತ) ಆಸರೆಯಾದರು.
266 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ‘ಎ’ ತಂಡಕ್ಕೆ ಸದೀರ ಸಮರವಿಕ್ರಮ (93 ರನ್: 113 ಎಸೆತ) ಆಸರೆಯಾದರು. ಆದರೆ, ಕೊನೆಯ ಓವರ್ನಲ್ಲಿ 5 ರನ್ ಬಿಟ್ಟುಕೊಡದೇ, ಶ್ರೀಲಂಕಾವನ್ನು 265ರನ್ಗೆ ನಿಯಂತ್ರಿಸಿದ ಅರ್ಷದ್ ಖಾನ್ ಪಂದ್ಯವನ್ನು ಸೂಪರ್ ಓವರ್ಗೆ ಕೊಂಡೊಯ್ದರು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ‘ಎ’ 16 ರನ್ ಗಳಿಸಿತು. ಭಾರತದ ಸೂರ್ಯವಂಶಿ ಮತ್ತು ಸೂರ್ಯಾಂಶ್ ಕೇವಲ 9 ರನ್ ಗಳಿಸಲಷ್ಟೇ ಶಕ್ತವಾದರು.
ತ್ರಿಕೋನ ಸರಣಿಯ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿರುವ ಭಾರತ ಎ ತಂಡದ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.








