ಗ್ಲಾಸ್ಗೊ:ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಸೇರಿ ಭಾರತದ 3 ಮಂದಿ ಕಾಮನ್ವೆಲ್ತ್ ಕ್ರೀಡೆಗಳ ಜಾವೆಲಿನ್ ಥ್ರೊ ಫೈನಲ್ಗೆ ಪ್ರವೇಶಿಸಿದ್ದಾರೆ.ಅರ್ಹತಾ ಸುತ್ತಿನ ಎರಡು ಗುಂಪು ಗಳಲ್ಲಿ ಮೊದಲ 12 ಸ್ಥಾನ ಪಡೆದವರು ಫೈನಲ್ಗೆ ಅರ್ಹತೆ ಪಡೆಯುತ್ತಾರೆ. ಚೋಪ್ರಾ ತಮ್ಮ ಐದನೇ ಯತ್ನದಲ್ಲಿ
79.61 ಮೀ. ಥ್ರೋ ಮಾಡಿ ಐದನೇ ಸ್ಥಾನದೊಡನೆ ಅರ್ಹತೆ ಪಡೆದರು.ರೋಹಿತ್ ಯಾದವ್ ಅವರು ಯನ್ನು 78.37 ಮೀ. ದೂರಕ್ಕೆ ಎಸೆದರೆ, ಯಶ್ವೀರ್ ಸಿಂಗ್ ಅವರು 78.36 ಮೀ. ದೂರ ಎಸೆದು ಅರ್ಹತ ಸುತ್ತಿನಲ್ಲಿ ಕ್ರಮವಾಗಿ ಒಂಬತ್ತು ಮತ್ತು ಹತ್ತನೇ ಸ್ಥಾನ ಪಡೆದು ಫೈನಲ್ಗೆ ಮುನ್ನಡೆದರು.
ಮಾಜಿ ವಿಶ್ವ ಚಾಂಪಿಯನ್ ನೀರಜ್ 76.28 ಮೀ.ನೊಡನೆ ಮೊದಲ ಯತ್ನ ಆರಂಭಿಸಿದರು. ಮೊದಲ ಸುತ್ತಿನ ನಂತರ ಅವರು ಆರನೇ ಸ್ಥಾನದಲ್ಲಿದ್ದರು. ಎರಡನೇ ಯತ್ನದಲ್ಲಿ 76.28 ಮೀ. ಎಸೆದು ಐದನೇ ಸ್ಥಾನಕ್ಕೇರಿದರು. ಯಶ್ವೀರ್ ಕೂಡ ಉತ್ತಮ ಆರಂಭ ಮಾಡಿದರು. ಮೊದಲು 73.89 ಮೀ. ಎಸೆದ 24 ವರ್ಷದ ಯಶವೀರ್ ಎರಡನೇ ಯತ್ನದಲ್ಲಿ 74.45 ಮೀ. ಮತ್ತು ಅಂತಿಮ ಯತ್ನದಲ್ಲಿ 78.36 ಮೀ. ಎಸೆದು ಅರ್ಹತೆ ಖಚಿಪಡಿಸಿಕೊಂಡರು.
ರೋಹಿತ್ 77.04 ಮೀ. ಎಸೆದು ವಿಶ್ವಾಸದೊಡನೆ ಆರಂಭ ಮಾಡಿದರು. ನಂತರ ಸುಧಾರಿಸಿ 78.37 ದೂರ ಎಸೆದರು. ಅವರೂ ಅಂತಿಮ ಯತ್ನಕ್ಕೆ ಮುಂದಾಗಲಿಲ್ಲ.







































