ಮುಂಬೈ : ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್ ಕಲೆ ಹಾಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮತ್ತೊಮ್ಮೆ ಅಬ್ಬರಿಸಿದರು. ಈ ವಿಶ್ವಕಪ್ ನಲ್ಲಿ 3 ಶತಕ ದಾಖಲಿಸಿದ ಮೊದಲ ಬ್ಯಾಟರ್ ಎಂಬ
ಗರಿಮೆ ಪಾತ್ರರಾದ ಕ್ವಿಂಟನ್ ಡಿʼಕಾಕ್ 140 ಎಸೆತಗಳಲ್ಲಿ 15 ಬೌಂಡರಿ, 7 ಸಿಕ್ಸರ್ ಗಳೊಂದಿಗೆ 174 ರನ್ ಸಿಡಿಸಿದರು. ಬಳಿಕ ಬ್ಯಾಟಿಂಗ್ ಬಂದ ಹೆನ್ರಿಚ್ ಕ್ಲಾಸೆನ್ ಬೀಸಾಟವಾಡಿದರು. ಕೇವಲ 49 ಎಸೆತಗಳಲ್ಲಿ 8 ಸಿಕ್ಸರ್, 2 ಬೌಂಡರಿಗಳೊಂದಿಗೆ 90 ರನ್ ಗಳಿಸಿದರು. ನಾಯಕ ಐಡೆನ್ ಮಾರ್ಕ್ರಮ್ 69 ಬೌಲ್ ಗಳಲ್ಲಿ 7 ಬೌಂಡರಿ ಸಹೀತ 60 ರನ್ ಗಳಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡೇವಿಡ್ ಮಿಲ್ಲರ್ 15 ಬಾಲ್ಗಳಲ್ಲಿ 4 ಸಿಕ್ಸರ್, 1 ಬೌಂಡರಿಯೊಂದಿಗೆ 34 ರನ್ ಸಿಡಿಸಿದರು. ಕೊನೆಯ ಓವರ್ಗಳಲ್ಲಿ ಅಕ್ಷರಷಃ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಕೊನೆಯ 10 ಓವರ್ಗಳಲ್ಲಿ 144 ರನ್ ಬಾಚಿದರು. ಕ್ಲಾಸೆನ್ ಮತ್ತು ಮಿಲ್ಲರ್ 20 ಎಸೆತಗಳಲ್ಲಿ 50 ರನ್ ಸಿಡಿಸಿದರು.