ಸುಳ್ಯ: ಸುಳ್ಯ ತಾಲೂಕಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2024-25 ನೇ ಸಾಲಿನಲ್ಲಿ 50 ಲಕ್ಷ ಅನುದಾನ ಬಿಡುಗಡೆಯಾಗಿದೆ. ರಸ್ತೆ ಕಾಮಗಾರಿ ಯೋಜನೆ ಅಡಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು – ಮಾಣಿಮರ್ದು ಪರಿಶಿಷ್ಟ ಪಂಗಡ ರಸ್ತೆ ಅಭಿವೃದ್ಧಿಗೆ ರೂಪಾಯಿ 10 ಲಕ್ಷ, ಆಲೆಟ್ಟಿ ಗ್ರಾಮದ ಪರಿವಾರಕಾನ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ
ರೂಪಾಯಿ 6 ಲಕ್ಷ, ನೆಲ್ಲೂರು ಕೆಮ್ರಾಜ್ಯ ಗ್ರಾಮದ ನಾರ್ಣಕಜೆ – ಏರ್ಮೆಟ್ಟಿ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 7 ಲಕ್ಷ, ಮಂಡೆಕೋಲು ಗ್ರಾಮದ ಕುಂಡಪಾರೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 5.50 ಲಕ್ಷ, ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 6 ಲಕ್ಷ, ಮಡಪ್ಪಾಡಿ ಗ್ರಾಮದ ಕಡ್ಯ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 5.50 ಲಕ್ಷ, ಕಲ್ಮಡ್ಕ ಗ್ರಾಮದ ಅಜ್ಜಿಗುಡ್ಡೆ ಅಳಕೆ ಪುಚ್ಚಮ್ಮ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 10 ಲಕ್ಷ ದಂತೆ ಒಟ್ಟು ರೂಪಾಯಿ 50 ಲಕ್ಷ ಅನುದಾನ ಬಿಡುಗಡೆ ಗೊಂಡಿರುತ್ತದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.