ಸುಳ್ಯ:ಸುಳ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ದೊರೆತಿದೆ.
ಅ. 7ರವರೆಗೆ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸುಳ್ಯದಲ್ಲಿ ಆರಂಭಗೊಂಡಿದ್ದು ತಹಶೀಲ್ದಾರ್ ಎಂ.ಮಂಜುಳ ಅವರ ನೇತೃತ್ವದಲ್ಲಿ
ಪರಿಶೀಲನೆ ನಡೆಸಲಾಯಿತು. ಪ್ರಾರಂಭಿಕ ಹಂತದಲ್ಲಿರುವ ತಾಂತ್ರಿಕ ಸಮಸ್ಯೆಗಳು,ರೂಟ್ ಮ್ಯಾಪ್ ಪ್ರಕಾರ ವಿವಿಧ ಕಡೆಗಳ ಮನೆಗಳನ್ನು ಕಂಡು ಹುಡುಕಲು ಗಣತಿ ಉಸ್ತುವಾರಿಗಳು ಸ್ಥಳೀಯರ ಸಹಕಾರ ಪಡೆದು ಕೊಳ್ಳಲಾಯಿತು, ಸುಳ್ಯ ತಹಶೀಲ್ದಾರ್ ಮಂಜುಳಾ ಅವರು ಮಾರ್ಗ ದರ್ಶನ ನೀಡಿದರು.ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಗೀತಾ, ಉಪ ತಹಶೀಲ್ದಾರ್ ಚಂದ್ರಕಾಂತ್ ಮೊದಲಾದವರು ಇದ್ದರು.







