ಸುಳ್ಯ:ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಡಾ.ಮುಖರ್ಜಿ ಪುಣ್ಯಸ್ಮರಣೆ ಕಾರ್ಯಕ್ರಮ ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ನಡೆಯಿತು. ಸಂಸ್ಮರಣಾ ಭಾಷಣ ಮಾಡಿದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಡಾ.ಮುಖರ್ಜಿಯವರ
ತ್ಯಾಗ,ಬಲಿದಾನ,ಹೋರಾಟಗಳಿಂದ ಬಂದ ಪಕ್ಷ ಹಂತ ಹಂತವಾಗಿ ಬೆಳೆದು ಇಂದು ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಈ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದು ತನ್ನ ಜೀವನವನ್ನು ತ್ಯಾಗ ಮಾಡಿದ ಎಲ್ಲಾ ಹಿರಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು.ಶಾಸಕಿ ಭಾಗೀರಥಿ ಮುರುಳ್ಯ ನುಡಿ ನಮನ ಸಲ್ಲಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ, ನಗರ ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ, ಪ್ರಮುಖರಾದ ಆಶಾ ತಿಮ್ಮಪ್ಪ, ಆರ್.ಕೆ.ಭಟ್ ಕುರುಂಬುಡೇಲು,ಸುಧಾಕರ ಕಾಮತ್, ಗುಣವತಿ ಕೊಲ್ಲಂತ್ತಡ್ಕ, ಶಿವಾನಂದ ಕುಕ್ಕುಂಬಳ, ಶ್ರೀಕಾಂತ್ ಮಾವಿನಕಟ್ಟೆ, ಹೇಮಂತ ಕಂದಡ್ಕ, ಹರೀಶ್ ಬೂಡುಪನ್ನೆ,ಜಿನ್ನಪ್ಪ ಪೂಜಾರಿ, ಕಿರಣ್ ಕುರುಂಜಿ, ಚಿದಾನಂದ ಕುದ್ಪಾಜೆ, ಬುದ್ಧ ನಾಯ್ಕ್, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಅಶೋಕ್ ಅಡ್ಕಾರ್, ಶೀಲಾ ಅರುಣ ಕುರುಂಜಿ, ಭಾರತಿ ಉಳುವಾರು, ಪ್ರವಿತಾ ಪ್ರಶಾಂತ್, ದಿವ್ಯ ಮಡಪ್ಪಾಡಿ, ಚಂದ್ರಶೇಖರ ನಡುಮನೆ, ಪ್ರದೀಪ್ ಕೊಲ್ಲರಮೂಲೆ,ಚಂದ್ರಶೇಖರ ಪನ್ನೆ, ಅವಿನಾಶ್ ಕುರುಂಜಿ, ಶಿವಪ್ರಸಾದ್ ನಡುತೋಟ,ಜಗನ್ನಾಥ ಜಯನಗರ, ಪ್ರಸಾದ್ ಕಾಟೂರು, ಹೇಮಂತ ಮಠ ಮತ್ತಿತರರು ಉಪಸ್ಥಿತರಿದ್ದರು.














