ಸುಳ್ಯ:ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ವೇಧಿಕೆಯ ಸುಳ್ಯ ತಾಲೂಕು ನೂತನ ಸಮಿತಿಯು ರಚನೆಯಾಯಿತು.ತಾಲೂಕು ವೇಧಿಕೆಯ ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ (ಪಿ.ಎಂ.ಶ್ರೀ ಶಾಲೆ ಗುತ್ತಿಗಾರು)ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಣೆಮರಢ್ಕ(ಸ.ಉ.ಹಿ.ಪ್ರಾ.ಶಾಲೆ ಮಂಡೆಕೋಲು) ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ
ವೆಂಕಟ್ ದಂಬೆಕೋಡಿ, ಸುರೇಶ್ ಕಣೆಮರಡ್ಕ
ಬಾಲಸುಬ್ರಹ್ಮಣ್ಯ ಎನ್ ಜಿ(ಸ.ಉ.ಹಿ.ಪ್ರಾ ಶಾಲೆ ಬಂಗ್ಲೆಗುಡ್ಡೆ), ಸಂಧ್ಯಾ ದೋಳ (ಸ.ಹಿ.ಪ್ರಾ.ಶಾಲೆ ಮರ್ಕಂಜ), ಕೋಶಾಧಿಕಾರಿಯಾಗಿ ರಾಮಚಂದ್ರ ಗೌಡ (ಕೆ.ಪಿ.ಎಸ್ ಬೆಳ್ಳಾರೆ) ಜತೆ ಕಾರ್ಯದರ್ಶಿಯಾಗಿ ಶೌಕತ್ ಅಲಿ (ಸ.ಕಿ.ಪ್ರಾ.ಶಾಲೆ ಮೇನಾಲ ಶಾಲೆ) ಆಯ್ಕೆಗೊಂಡರು.
ವೇದಿಕೆಯ ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ವಿವಿದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷ ಉಪಾಧ್ಯಕ್ಷರುಗಳ ಒಟ್ಟು 21 ಮಂದಿ ಸದಸ್ಯರನ್ನೊಳಗೊಂಡ ಸಮಿತಿ ರಚನೆಗೊಂಡಿರುತ್ತದೆ.ಜಿಲ್ಲಾ ಉಪಾಧ್ಯಕ್ಷೆ ರಾಜೇಶ್ವರಿ ಕಾಡುತೋಟ ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು.