ಸುಳ್ಯ:ಭವಿಷ್ಯದ ಕುರಿತು ಅತಿಯಾಗಿ ಚಿಂತಿಸದೆ, ವರ್ತಮಾನದಲ್ಲಿ ಬದುಕಿ, ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡಿದರೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಸಂತೋಷ ದೊರಕಲು ಸಾಧ್ಯ ಎಂದು ಮೂಡಬಿದಿರೆ ಜೈನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾತ್ ಬಲ್ನಾಡ್ ಹೇಳಿದರು.ಅವರು ಸುಳ್ಯದ ಶ್ರೀ ಶಾರದಾ ಪ್ರೌಢಶಾಲೆ ಮತ್ತು ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು
ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ದ.ಕ. ಗೌಡ ವಿದ್ಯಾಸಂಘದ ಪ್ರಧಾನ ಕಾರ್ಯದರ್ಶಿ ಡಾ.ರೇವತಿ ನಂದನ್, ಕೋಶಾಧಿಕಾರಿ ಮಾಧವ ಗೌಡ ಬೆಳ್ಳಾರೆ, ನಿರ್ದೇಶಕ ಜಯರಾಮ ಚಿಲ್ತಡ್ಕ, ವಿದ್ಯಾರ್ಥಿ ನಾಯಕರಾದ ಜೊಯ್ಸ್ಟನ್ , ಷೇಕ್ ಮುಹಮ್ಮದ್ ಪಯಾಝ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಶಿತಾ ಕೇಶವ್, ಪ.ಪೂ. ವಿಭಾಗದ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆ ರೇಖಾ, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಕೆ, ಕಾಲೇಜಿನ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಭಾರತಿ ಪಿ. ಪ್ರೌಢಶಾಲಾ ವಿಭಾಗದ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಸ್ವರ್ಣಕಲಾ ಎ.ಎಸ್. ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಪ್ರಸನ್ನ ಎನ್.ಎಚ್. ಅತಿಥಿಗಳನ್ನು ಪರಿಚಯಿಸಿದರು.ವಾರ್ಷಿಕೋತ್ಸವ ಅಂಗವಾಗಿ ನಡೆದ ಕ್ರೀಡಾಕೂಟದ ಬಹುಮಾನ ವಿತರಣೆ ನಡೆಯಿತು. ಶೈಕ್ಷಣಿಕ ಸಾಧಕರನ್ನು ಗೌರವಿಸಲಾಯಿತು. ಕ್ರೀಡಾಕೂಟದ ವಿಜೇತರ ಪಟ್ಟಿಯನ್ನು ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಭಾವತಿ ಹಾಗೂ ಪಿಯು ವಿಭಾಗದ ಪಟ್ಟಿಯನ್ನು ರಾಜ್ಯಶಾಸ್ತ್ರ ಉಪನ್ಯಾಸಕ ದಾಮೋದರ ಎನ್, ಸಾಧಕರ ಪಟ್ಟಿಯನ್ನು ಶಿಕ್ಷಕಿ ಗಾಯತ್ರಿ ವಾಚಿಸಿದರು.ಶಿಕ್ಷಕಿ ಅಪರ್ಣಾ ವಂದಿಸಿದರು.ವಿದ್ಯಾರ್ಥಿನಿ ಶ್ರೀವಲ್ಲಿ ಮತ್ತು ಕಿಶನ್ ಬಿ. ಕಾರ್ಯಕ್ರಮ ನಿರೂಪಿಸಿದರು.











